Wednesday, September 9, 2009

ನೀನೇ ಬರಿ ನೀನೇ ಟ್ಯೂನಿಗೆ ನನ್ನ ಸಾಹಿತ್ಯ

ಏಕೆ ಹೀಗೇಕೆ
ನಿನ ಪ್ರೇಮಕ್ಕೆ ನಾನೇಕೆ ಸೋತೆ
ಏಕೆ ಹೀಗೇಕೆ
ನಿನ ನೆರಳ೦ತೆ ನಾನಾಗಿ ಹೋದೆ
ಏಕೆ ಹೀಗೇಕೆ
ನಿನ್ನೊಳಗೇಕೆ ನಾ ಸೇರಿಹೋದೆ
ಕಾಣದ ದಿಕ್ಕಿಗೆ ಕೈ ತೋರುತ
ಕಾಲವ ಹಿಡಿಯಲು ನೀ ಹೇಳುವೆ
ಸೋಜಿಗ ನಿನ್ನ ಮಾತಲ್ಲಿದೆ
ನಾ ಹಿಡಿದೆ ಕಾಲವ ಕಣ್ಣಲ್ಲಿಯೇ
ಹೀಗೇ ಕನಸಿನ ಲೋಕಕೆ ಕಾಲಿಡಬೇಕಿದೆ
ನಿನ್ನೊ೦ದಿಗೆ..ನಿನ್ನೊ೦ದಿಗೆ
ಗೆಲುವಿನ ಪ್ರತಿ ಹೆಜ್ಜೆ ನಿನ್ನೊ೦ದಿಗೆ
ನಡೆದಾಗಿದೆ ಗೊತ್ತಿಲ್ಲದೆ
ಚಿತ್ತಾರದೊಳಗಿರೋ ವಿಸ್ತಾರವೇ
ಕಣ್ಣಳತೆಗೂ ಹೊರಗೋಡಿದೆ
ಏನಿದೆ ನಿನ್ನ ಮನಸಲಿ ಕೇಳುವೆ ಪಿಸುಮಾತಲಿ
ಮನಸೊ೦ದಿಗೆ ಮನಸೊ೦ದಿಗೆ