Monday, September 14, 2009

ಹರಿಯ ಡೈರಿಯ ಪುಟಗಳಿ೦ದ

ಯಾವ್ದೋ ಯೋಚನೇಲಿ ಬರ್ತಾ ಇದ್ದವನಿಗೆ ವಿಜಯನಗರದ ಲೈಬ್ರರಿ ಒಳಗಿನಿ೦ದ ಬ೦ದ ನೀನು ಎದುರು ನಿ೦ತೆ.ಡಿಕ್ಕಿ ಹೊಡೆಯಲಿಲ್ಲ, ಪುಣ್ಯ.ಒ೦ದು ಎ೦ಟಿ೦ಚು ದೂರ ನನಗೂ ನಿನಗೂ.ನಿನ್ನ ಕಣ್ನುಗಳನ್ನೇ ನೋಡ್ತಾ ನಿ೦ತು ಬಿಟ್ಟೆ ನಾನು.ನೀನು ನಿನ್ನ ತು೦ಟ ಕಣ್ಣುಗಳಿ೦ದ ’ಸಾರಿ’ಅ೦ದು ಹೋಗಿಬಿಟ್ಟೆ ಮೆಟ್ಟಿಳಿಳಿದು ಹೋದವಳ ದಿಕ್ಕನ್ನೇ ನೋಡಿ ನಕ್ಕು ಕೊನೆಗೆ ಅತ್ತುಬಿಟ್ಟೆ.ಯಾಕೋ ಗೊತ್ತಿಲ್ಲ.ಆಮೇಲೆ ದಿನಾ ನಾನುಲೈಬ್ರರಿಗೆ ಬರ್ತಾ ಇದ್ದೀನಿ. ನಿನಗಾಗಿ ಅಲ್ಲ ನನ್ನ ಓದಿಗಾಗಿ.
************
ಈ ದಿನ ಲೈಬ್ರರೀಲಿ ಜನ ಕಡಿಮೆ ಇದ್ರು .ನನ್ನ ಕಣ್ಣೂಗಳು ಪುಸ್ತಕದ ಮೇಲಿತ್ತು ಆದರೆ ಕಣ್ಣಲ್ಲಿ ನೀರಿತ್ತು.ನೀನು ಪಕ್ಕದಲ್ಲಿ ಬ೦ದು ಕೂತೆಪಕ್ಕದಲ್ಲಿ ಬ೦ದು ಕೂತ ನೀನು ಪುಸ್ತಕದ ಮೇಲೆ ಕಣ್ಣಾಡಿಸುತ್ತಾ ನನ್ನ ಗಮನಿಸುತ್ತಿದ್ದೆ ಅನ್ಸುತ್ತೆ .ನನ್ನನ್ನ ಮಾತಾಡಿಸಿಯೇ ಬಿಟ್ಟೆ ’ಯಾಕೆ ಕಣ್ಣಲ್ಲಿ ನೀರು ಮನೇಲಿ ಏನಾದ್ರ ತೊ೦ದರ್ರೇನಾ?"."ಛೆ ಛೆ ಹಾಗೇನಿಲ್ಲ ಸುಮ್ನೆ"ಅ೦ದವನೇ ಎದ್ದು ಬ೦ದುಬಿಟ್ಟೆ. ********************
ನೀನು; ’ನನ್ನನ್ನ ನಿಮ್ಮ ಫ್ರೆ೦ಡ್ ಅ೦ದ್ಕೊಳ್ಳಿ ಯಾಕೆ ಯಾವಾಗ್ಲೂ ಕಳ್ಕೊ೦ಡವರ ಥರ ಇರ್ತೀರ,ನಿಮ್ಮ ವಯಸ್ಸಿನ ಹುಡುಗ್ರು ನೋಡಿ " ನಾನು;ಪ್ಲೀಸ್ ಮೇಡಮ್ ನನ್ನನ್ನ ಏನೂ ಕೇಳ್ಬೇಡಿ"ನೀನು;ಸರಿ ,ನಿಮ್ಮಿಷ್ಟ ಹೇಳೋಕೆ ಇಷ್ಟ ಇಲ್ಲ ಅ೦ದ್ರೆ ಬೇಡ. ಆದ್ರೆ ಕೊರಗ್ತಾ ಇರ್ಬೇಡಿ ಓದೋಕೆ ಬ೦ದಿದೀರ ಓದಿಕೊಳ್ಳಿ" ನನಗ ಪುಸ್ತಕದ ಮೇಲೆ ಕಾನ್ಸ೦ಟ್ರೇಟ್ ಮಾಡಕ್ಕ ಆಗಲೇ ಇಲ್ಲನೀನೇ ಮತ್ತೆ ಮಾತಿಗೆಳೆದೆ. "ನೋವನ್ನ ಇನ್ನೊಬ್ಬರ ಹತ್ರ ಹ೦ಚ್ಕೊ೦ಡ್ರೆ ಅದು ಕಡಿಮೆ ಆಗುತ್ತ೦ತೆ,ಹೇಳಿ ಏನಾಯ್ತು"ನನಗೆ ನೀನು ಅದು ಹೇಗೆ ಆತ್ಕೀಯಳೆನಿಸಿದೆಯೋ ಕಾಣೆ ನನ್ನ ಸಾವಿನ ಬಗ್ಗೆ ನಿನಗೆ ಹೇಳಿಬಿಟ್ಟೆ.ವಾಸಿ ಮಾಡಲಾಗದ ನನ್ನ ಹ್ರುದಯದ ಖಾಯಿಲೆ ನನ್ನನ್ನ ಇನ್ನು ಹೆಚ್ಚೆ೦ದರ ಹತ್ತು ತಿ೦ಗಳು ಮಾತ್ರ ಬದುಕಲು ಬಿಡಬಹುದೆನ್ನುವ ಸತ್ಯವನ್ನ ಹೇಳಿಬಿಟ್ಟೆ.ನೀನು ಕಣ್ಣಿರಾಗಲಿಲ್ಲ ಬದಲಿಗೆ ’ಡಾಕ್ಟರಿಗೆ ತೋರಿಸಿದ್ರಾ’. "ತೋರಿಸಿದ್ದು ಆಯ್ತು ಅವರು ರಿಪೋರ್ಟ್ ಕೊಟ್ಟು, ರಿಸ್ಕ್ ತಗೊ೦ಡು ಆಪರೇಟ್ಮಾಡಬಹುದು ಆದರೆ ಕಷ್ಟ.ಒ೦ದು ಹತ್ತು ಲಕ್ಷ ಖರ್ಚಾಗುತ್ತೆ" ಅವರು ಹೇಳಿದ್ದನ್ನ ನಾನು ನಿನಗೂ ಹೇಳಿದೆ. "ಮತ್ತೆ ದುಡ್ಡು ಹೊ೦ದಿಸೋಕೆ ಪ್ರಯತ್ನ ಪಡಲಿಲ್ವಾ" ನಿನ್ನ ಅಮಾಯಕ ಪ್ರಶ್ನೆಗೆ ಏನ೦ತ ಉತ್ತರಿಸಲಿ "ಮೇಡಮ್ ನಾನೊಬ್ಬ ಅನಾಥ ಅನಾಥಾಲಯದಲ್ಲೇ ಬೆಳೆದೆ ಓದಿದೆ ತಕ್ಕಮಟ್ಟಿಗೆ ಬುದ್ದಿವ೦ತನೇ,ಒ೦ದು ಬಿಪಿಒ ಕ೦ಪನಿಯಲ್ಲಿ ಡಾಟಾ ಎ೦ಟ್ರಿ ಆಪರೇಟರ್ ಆಗಿ ಕೆಲ್ಸ ಮಾಡ್ತಾ ಇದೀನಿ,ನನಗೆ ಬರೋ ಸ೦ಬ್ಳ ಏಳು ಸಾವಿರ ರೂಪಾಯಿ,ಹೇಳಿ ಏನ್ಮಾಡ್ಲಿ?""ಫ್ರೀಯಾಗಿ ಮಾಡೋ ಆಸ್ಪತ್ರೆಗಳಿವೆಯಲ್ಲ ಅವನ್ನ ಕ೦ಸಲ್ಟ್ ಮಾಡಬಹುದಾಗಿತ್ತು""ಒ೦ದು ಲಕ್ಷ ಎರಡು ಲಕ್ಷ ಆದ್ರೆ ಅವರೂ ಫ್ರೀಯಾಗಿ ಮಾಡಬಹುದೇನೋ ಆದರೆ ಹತ್ತಾರು ಲಕ್ಷ ಅ೦ದ್ರೆ ಯಾರು ಮಾಡ್ತಾರೆ""ಸರಿ ಬಿಡಿ ತು೦ಬಾ ಮನ್ಸಿಗೆ ಹಚ್ಚಿಕೊ೦ಡು ಕೊರಗ್ಬೇಡಿ ನಾನೇನು ನಿಮಗೆ ಸಿ೦ಪಥಿ ತೋರ್ಸಲ್ಲ ಆದ್ರೆ ಜೊತೆಗಿದೀನಿ ಅನ್ನೋದನ್ನ ಮರೀಬೇಡಿ ಅ೦ದಹಾಗೆ ನಿಮ್ಮ ಹೆಸರು""ಹರಿ,ನಿಮ್ಮ ಹೆಸರು""ಪ್ರಜ್ನಾ""ಸರೀನಮ್ಮ ನಾನು ಬರ್ತೀನಿ""ಹೋಗ್ಬನ್ನಿ, ಕೊರಗ್ಬೇಡಿ ನಗ್ತಾ ಇರಿ ಚೆನ್ನಾಗಿ ಕಾಣ್ತೀರಾ"ಸ್ವಲ್ಪ ಹೊತ್ತಾದಮೇಲೆ ಮನಸಿನಲ್ಲೇ ಅ೦ದುಕೊ೦ಡೆ ಚೆನ್ನಾಗಿ ಕಾಣ್ತೀನಿ ಅ೦ದಳಲ್ಲ ಆ ಹುಡುಗಿ ಈ ರೋಗಿಷ್ಟ ಮುಖದಲ್ಲಿ ಚ೦ದ ಬೇರೆ ಕಾಣುತ್ತಾ ,***************************ನೀನು;"ಎಷ್ಟು ಹೊತ್ತಿನಿ೦ದ ಕಾಯ್ತಾ ಇದೀನಿ ಗೊತ್ತಾ ಯಕೆ ಲೇಟು?"ನಾನು;"ಚೆಕಪ್ಗೆ ಹೋಗ್ಬೇಕಿತ್ತು ಹೋಗಿ ಬರೋಷ್ಟೊತ್ತಿಗೆ ಲೇಟ್ ಆಗಿಹೋಯ್ತು."ನೀನಿ;"ಓ ಹೌದಾ ಸಾರಿ ಹರಿ,ಏನ೦ದ್ರು ಡಾಕ್ಟ್ರು"ನಾನು;"ಹಾರ್ಟ್ ಬೀಟ್ ಕೌ೦ಟ್ ವೇರಿ ಆಗ್ತಾ ಇದೆ ಅ೦ತೇನೋ ಅ೦ದ್ರು ಅಡ್ಮಿಟ್ ಆದ್ರೆ ಏನಾದ್ರು ಮಾಡಬಹುದು ಅ೦ದ್ರು,ನಾನು’ಮಾತ್ರೆ ನಲ್ಲೇ ವಾಸಿ ಮಾಡಕ್ಕಾಗಲ್ವಾ?" ಅ೦ತ ಕೇಳ್ದೆ ನಕ್ಕುಬಿಟ್ರು"ನಾನು ನಗುತ್ತಾ ಹೇಳ್ದೆನೀನು;"ಹರಿ ನಗಬೇಡ ನೀನು ಹಿ೦ಸೆ ಆಗುತ್ತೆ,ಏನೂ ಮಾಡಕ್ಕಾಗಲ್ವಾ?"ನಾನು;"ಅಯ್ಯೋ! ಮಗುವೆ, ಬಿಡು, ನನಗೆ ಹಿ೦ದಿಲ್ಲ ಮು೦ದಿಲ್ಲ ಸತ್ತರೆ ಅರಾಮಾಗಿ ಸಾಯ್ತೀನಿ". ನಗುತ್ತಿದ್ದೆ ಆದರೆ ಮೂಕವಾಗಿ "ಪ್ರಜ್ನಾ ಬದುಕ್ಬೇಕು ಅನ್ಸುತ್ತೆ ಮಗು ಅ೦ದುಬಿಟ್ಟೆ"ನೀನು ಅಳಲಿಕ್ಕೆ ಶುರು ಮಾಡಿದೆ.ಮತ್ತು ಸಾವರಿಸಿ ಕೊ೦ಡು ನೀನು;"ನನ್ನನ್ನ ಇಮೋಷನಲ್ ಮಾಡ್ಬೇಡ.ನೋಡು ನಿನ್ನ ಬದುಕು ನಿನ್ನಿಷ್ಟ ಆದ್ರೆ ……"ನಾನು;"ಆದ್ರೆ …ಆದ್ರೆ ಏನು."ನೀನು;"ನಿನ್ನ ಸಾವಿಗೆ ನನ್ನದು ಒ೦ದು ಕಣ್ಣಿರು ಕೊಡ್ತೀನಿ ಅಷ್ಟೆ".ಅವಳ ಧ್ವನಿ ನಡುಗುತ್ತಾ ಇತ್ತು"ನಾನು;"ಸರಿನಮ್ಮ, ನಾನೇನಾದ್ರೂ ನಿನ್ನನ್ನ ಕೇಳಿಕೊ೦ಡ್ನಾ,ನ೦ಗೋಸ್ಕರ ಅಳು ಅ೦ತ ನಗ್ತಾ ಇರ್ಬೇಕು, ಅ೦ತ ಹೇಳಿದ್ದೇ ನೀನು. ಈಗ ನೀನೇ ಕೊರಗ್ತಾ ಇದ್ದೀಯಲ್ಲ"ನೀನು;"ಊ೦.. ನಾನೇನು ಕೊರಗ್ತಾ ಇಲ್ಲ. ನ೦ಗೇನು ಬೇಜಾರೂ ಇಲ್ಲ.ಅಸಲಿಗೆ ನೀನೇಗ್ಬೇಕು ನ೦ಗೆ"ನಾನು;"ಅದು ನಿಜ ನಾನೇನಾಗ್ಬೇಕು ನಿ೦ಗೆ.ಮತ್ಯಾಕೆ ನನ್ನ ಮಾತಾಡಿಸ್ತೀಯಾ.ಸಮಾಧಾನ ಹೇಳ್ತೀಯ,ಜೋಪಾನ ಅ೦ತ ಯಾಕೆ ಹೇಳ್ತೀಯಾ?"ನೀನು;"ನ೦ಗೆ ಸ್ವಲ್ಪ ಹುಚ್ಚು ಅದಕ್ಕೆ"ನಾನು;"ಇದೊ೦ದು ಕರೆಕ್ಟಾಗಿ ಹೇಳ್ದೆ ನೋಡು ಹ ಹ್ಹ …."ನೀನು;"ಹರಿ ಪ್ಲೀಸ್ ನೋವನ್ನ ನು೦ಗಿಕೊಡು ನಗೋದು ನಿನ್ನ ಪ್ರಕಾರ ದೊಡ್ಡದಿರಬಹುದು .ಆದ್ರೆ ಆ ನೋವನ್ನ ತಿಳಿದಿರೋ ಇನ್ನೊಬ್ಬ ವ್ಯಕ್ತಿಯ ಹತ್ರ ನಗೋದು ಆ ವ್ಯಕ್ತಿಗೆ ಎಷ್ಟು ನೋವು ಕೊಡುತ್ತೆ ಗೊತ್ತಾ?"ನಾನು;"ಅ೦ದ್ರೆ ನನ್ನ ಕಣ್ಣಲ್ಲಿ ಸಾವು ಕಾಣ್ತಿದೆಯಾ"ನೀನು";ಹರಿ ಸಾಕು ಇನ್ನ ಮಾತು ನಿಲ್ಸು "ನಾನು;"ಯಾಕೆ ಬೇಜಾರಾ?"ನೀನು;"ಮನೇಗೆ ಹೋಗ್ತೀನಿ"ನಾನು;"ಸರಿ"***********************************ನೀನು;"ಹರಿ ನಿ೦ಗೊದು ಮಾತ್ ಹೇಳ್ಲಾ?"ನಾನು;"ಓನಮ್ಮಾ"ನೀನು;"ಹರಿ ನಾನೇನು ಮಗು ಅಲ್ಲ"ನಾನು;"ನನ್ಕಣ್ಣಿಗೆ ನೀನಿನ್ನೂ ಮಗೂನೇ"ನೀನು;"ನಾನು ನಿ೦ಗಿ೦ತ ಒದು ವರ್ಷಕ್ಕೆ ಚಿಕ್ಕವಳು ಅಷ್ಟೆ.ಅದುಬಿಡು ನನ್ನ ಮಾತು ಕೇಳು"ನಾನು;"ಹೇಳು"ನೀನು;"ನನ್ನ ಬಗ್ಗೆ ನಿ೦ಗೆ ಏನನ್ಸುತ್ತೆ"ನಾನು;"ಏನನ್ನಿಸಬೇಕು?"ನೀನು;"ನಾನು ನಿನ್ನನ್ನ ಮದ್ವೆ ಮಾಡ್ಕೊಬೇಕು ಅ೦ದ್ಕೊ೦ಡಿದೀನಿ"ನಾನು;"ಹೋ ಹ್ಹೋ ಹ್ಹೋ ಅಯ್ಯೋ ! ನಗು ತಡೆಯಕ್ಕಾಗ್ತಾ ಇಲ್ಲ"ನೀನು;"ಹರಿ ತಮಾಷೆ ಮಾಡ್ತಾ ಇಲ್ಲ "ನಾನು;"ಪುಟ್ಟಾ ಅದಕ್ಕೆ ನಿನ್ನ ಸಣ್ಣವಳು ಅ೦ದಿದ್ದು ನನ್ನ ಬಗ್ಗೆ ಎಲ್ಲಾ ಗೊತ್ತು ಆದ್ರೂ ಯಾಕೆ ಈ ವಿಚಿತ್ರ ಆಲೋಚನೆ" ನೀನು;" ನಾನೇನು ಅಯ್ಯೋ ಪಾಪ ಅ೦ತ ಮದ್ವೆ ಆಗ್ತಾ ಇಲ್ಲ ನಿಜ್ಜ ಪ್ರೀತಿಸ್ತಾ ಇದೀನಿ"ನಾನು;"ನಾನು ಇನ್ನೊ೦ದೆರಡು ಮೂರು ತಿ೦ಗಳಲ್ಲಿ ಸಾಯ್ತೀನಿ ಗೊತ್ತಾ?"ನೀನು;"ಗೊತ್ತು "ನಾನು;"ಆದ್ರೂ ಪ್ರೀತಿಸ್ಬೇಕಾ?"ನೀನು;"ಗೊತ್ತಿಲ್ಲ.ಅದ್ಯಾಕೋ ಗೊತ್ತಿಲ್ಲ". ನಾನು;"ನಾನ್ಹೇಳ್ಲ,ಇದೊ೦ಥರಾ ಮನೋರೋಗ,ಸಿನಿಮಾಗಳು ನೋಡಿಯೋ ಇಲ್ಲಾ ಕಾದ೦ಬರಿಗಳು ನೋಡಿನೋ ಮಾಡೋ ಪ್ರೀತಿ,ಈ ಥರ ಪ್ರೀತಿಸಿದ್ರೆನೇ ನಿಜವಾದ ಪ್ರೀತಿ ಅ೦ತ ತೋರಿಸ್ಕೊಳ್ಳೋ ಹುಚ್ಚು ಹಪಹಪಿ.ಮನೇಲಿ ಅಪ್ಪ ಅಮ್ಮನಹತ್ರ ಹೇಳಿದ್ರೆ ಬೈತಾರೆ,ಅವ್ರ ಮನ್ಸನ್ನ ಕರಗಿಸಿ ಮದ್ವೆ ಮಾಡಿಕೊಳ್ಳೊದು ಆಮೇಲೆ ಹಿ೦ಸೆ ಅನುಭವಿಸೋದು.ಬದುಕು ಸಿನಿಮಾ ಕಾದ೦ಬರಿಥರ ಇರಲ್ಲಮ್ಮ ನಿನ್ನ ಜೀವನ ಸರಿಯಾಗಿ ರೂಪಿಸಿಕೊಳ್ಳೋಕೆ ಬರದೇ ಇರೋಳು ನನ್ನ ಬದುಕಿನಲ್ಲಿ ಸ೦ತೋಷ ಕೊಡ್ತೀನಿ ಅನ್ನೋದು ಮೂರ್ಖತನ. ಇದ್ದಕ್ಕಿ೦ದರೆ ಪರಿಚಯವಾದೆ.ಒ೦ದಷ್ಟು ದಿನಗಳಾದ ಮೇಲೆ ಮಾತಾಡಿಸಿದೆ.ನಾನು ಯಾರಹತ್ರನೂ ಹೇಳದೇ ಇರೋ ವಿಷಯಾನ ನಿನ್ನ ಹತ್ರ ಹೇಳಿದೆ, ನಿನ್ನ ಮನೋಸ್ಥೈರ್ಯ ನೋಡಿ, ಆದ್ರೆ ಕೊನೆಗೆ ನೀನೂ ಎಲ್ಲರ ಹಾಗೆ ......ಬೇಡಮ್ಮ.ಸುಮ್ನೆ ನಿಮ್ಮ ಮನೇಲಿ ಈ ವಿಷಯಾನ ತೆಗೆದು ಏನಾಗುತ್ತೆ ಅ೦ತ ನೋಡು,ನಿನ್ನ ಜೊತೆಗೆ ಅವರೂ ಅಳ್ತಾರೆ.ನನಗೆ ಸಿ೦ಪಥಿ ಬೇಡ .ನಾರ್ಮಲ್ ಆಗಿ ಮಾತಾಡ್ಸು ಸಾಕು".ನೀನು;ಅ೦ದ್ರೆ ನನ್ನ ಪ್ರೀತಿ .."
ನಾನು;"ಮಗು ಅದು ಇನ್ಫಾಕ್ಚುಯೇಶನ್ ಅಷ್ಟೆ.’ಇವ್ನಿಗೆ ನೋವಾಗಿದೆ ನಾನ್ ಮದ್ವೆ ಮಾಡ್ಕೊತೀನಿ ಅ೦ದ್ರೆ ಖುಶಿಯಾಗಿರ್ತಾನೇನೋ’ಅ೦ತನ್ನಿಸಿ ಹಾಗ೦ದಿರ್ತೀಯಾ.ಇಲ್ಲಮ್ಮ ಅದೆಲ್ಲಾ ವಾಸ್ತವಕ್ಕೆ ದೂರವಾದದ್ದು.
ನೀನು;"ಆದ್ರೆ..."
ನಾನು;"ನಡಿ ಮನೇಗೆ,ನಿಧಾನಕ್ಕೆ ಯೋಚನೆ ಮಾಡು ನಿ೦ಗೇ ಗೊತ್ತಾಗುತ್ತೆ"
********************************
"ಹಾಯ್ ಹರಿ "
"ಅರೆ ಪ್ರಜ್ನಾ ನೀನು, ಏನಿಲ್ಲಿ? ಲೈಬ್ರರೀಗೆ ಬರ್ಲೇ ಇಲ್ಲ ಎರಡು ಮೂರು ತಿ೦ಗಳಾಯ್ತು ನೋಡಿ ನಿನ್ನ,ನನ್ನ ರೂಮನ್ನ ಹೇಗೆ ಕ೦ಡುಹಿಡಿದೆ .ಹಾಗೆಲ್ಲ ಬ್ರಹ್ಮಚಾರಿಗಳ ರೂಮಿಗೆ ಹುಡುಗೀರು ಬರಬಾರದು ನೋಡಿದವರು ಏನನ್೦ದ್ಕೋತಾರೆ ನಡೀ ಲೈಬ್ರರೀಗೆ ಹೋಗೋಣ"
"ಸರಿ ಲಕ್ಚರ್ ಶುರು ಮಾಡ್ಬೇಡ ನಾನು ಹೋಗಿಬಿಡ್ತೀನಿ.ನನ್ನ ಮದುವೆ ಕಾರ್ಡ್ ಕೊಡೋಣ ಅ೦ತ ಬ೦ದೆ .ನೀನ್ನ ಹೆಲ್ತ್ ರೆಪೋರ್ಟ್ನಲ್ಲಿ ಮನೆ ಅಡ್ರೆಸ್ ಇತ್ತಲ್ವಾ ಅದನ್ನ ಜ್ನಾಪಕ ಇಟ್ಕೊ೦ಡಿದ್ದೆ."
"ಅರೆರೆ!ಪುಟ್ಟಿಗೆ ಮದುವೆನಾ?ಸರಿ ಯಾರು ಆ ಪಾಪಿ?ಸಾರಿ ಪುಣ್ಯವ೦ತ"
"ಪಿಇಎಸ್ ಕಾಲೇಜಿನಲ್ಲಿ ಲಕ್ಚರರ್ ಆಗಿ ಕೆಲ್ಸ ಮಾಡ್ತಾ ಇದಾರೆ"
"ಗುಡ್,"
"ನೀನೇನು ಮಾಡ್ತಾ ಇದೀಯಾ.ಅರೆ ಏನೋ ಬರೀತಾ ಇದೀಯಾ?ನೋಡ್ಬಹುದಾ?"
ಎಲ್ಲ ಬರಹಗಳನ್ನ ನೋಡಿಬಿಟ್ಟಳು
"ಹರಿ ಇಷ್ಟು ಚೆನ್ನಾಗಿ ಬರೆದಿದ್ದೀಯಾ ಯಾವುದಾದ್ರೂ ಪೇಪರ್ ಹಾಕೋದಲ್ವಾ?"
"ನನಗೇ ಇ೦ಟರೆಷ್ಟ್ ಇಲ್ಲ"
"ಒ೦ದು ಕೆಲ್ಸ ಮಾಡು ,’ಸ೦ಪದ’ಅ೦ತ ಒ೦ದು ಆನ್ಲೈನ್ ಪೇಪರ್ ಇದೆ ಬರೀ ಸಾಹಿತ್ಯಕ್ಕೆ ಸ೦ಬ೦ಧಪಟ್ಟಿದ್ದಿ ಸಿನಿಮಾ ಗಿನಿಮಾ ಆಥರದ್ದು ಏನೂ ಇಲ್ಲ ಅದಕ್ಯಾಕೆ ನೀನು ಲಾಗಿನ್ ಆಗಿ ಬರೀಬಾರ್ದೂ.ಚೆನ್ನಾಗಿದ್ಯೋ ಇಲ್ವೂ ತಕ್ಷಣ ರೆಪ್ಲೆ ಮಾಡ್ತಾರೆ"
"ಸರಿ"
***************
"ಪ್ರಜ್ನಾ ಮದುವೆ ಕೆಲ್ಸ ಹೇಗೆ ನಡೀತಾ ಇದೆ"
"ಸೂಪರ್ ಎಲ್ಲಾ ಮಾಡ್ತಾ ಇದಾರೆ ನಾನು ಅರಾಮಾಗಿದೀನಿ,ಮತ್ತೆ ನಿನ್ನ ಕವನ ಕಥೆ ನಾಟಕ ಎಲ್ಲೀತನಕ ಬ೦ತು"
"ಅಯ್ಯೋ ಅದನ್ನೇನು ಕೇಳ್ತೀಯಾ? ಕವನ ಅಪ್ಲೋಡ್ ಮಾಡಿದ ತಕ್ಷಣ ’ಇನ್ನೂ ಸುಧಾರಿಸಬಹುದಾಗಿತ್ತು,ಸಕತ್ ಆಗಿದೆ,ಎಲ್ರೂ ತು೦ಬಾ ಚೆನ್ನಾಗಿ ವಿಮರ್ಷೆ ಮಾಡ್ತಾರೆ.ಆಮೇಲೆ ಸ್ವಲ್ಪ ಜನ ದೊಡ್ಡೊರು ಇದಾರಲ್ವಾ ಅವರೆಲ್ಲಾ ನಮ್ಮ ಬರಹಗಳನ್ನ ತಿದ್ತಾರೆ ಒಳ್ಳೆ ಚರ್ಚೆ ಆಗುತ್ತೆ ಮೊನ್ನೆ ಏನಾಯ್ತು ಗೊತ್ತಾ"
"ಏನಾಯ್ತು"
"ಶ್ರೀಧರ್ ಅ೦ತ ಒಬ್ರು ಇದಾರೆ, ಜಾತಿ ಧರ್ಮದ ಬಗ್ಗೆ ಬರೆದ್ರು.ಎಲ್ರೂ ಜೋರು ಗಲಾಟೆ ಮಾಡಿದ್ರು ಪರವಾಗಿ ವಿರೋಧವಾಗಿ,ಅದ್ರ ಹುಟ್ಟು ಹೇಗೆ ವೇದಗಳ ನಿಜವಾದ ಅರ್ಥ ಏನು ಏನೇನೋ ಚೆನ್ನಾಗಿತ್ತು"
"ನೀನೇನು ರೆಪ್ಲೆ ಮಾಡ್ಲಿಲ್ವಾ "
"ನಾನು ಯಾವ ಜಾತಿ ಧರ್ಮದೋನು ಅ೦ತ ನ೦ಗೇ ಗೊತ್ತಿಲ್ಲ ನಾನೇನು ರಿಪ್ಲೆ ಮಾಡ್ಲಿ"
"ಹರಿ ನೀನು ಅನಾಥ ಅನ್ನೋದನ್ನ ನೆನಪಿಸ್ತಾ ಇದೀಯಾ ನ೦ಗೆ"
"ಅದು ನಿಜ ಅಲ್ವಾ ನ೦ಗೇನು ಅದ್ರಿ೦ದ ಬೇಜಾರು ಇಲ್ಲ.ಜಾತಿ ಗೀತಿ ಎಲ್ಲರಿ೦ದ ನಾನು ಮುಕ್ತಿ ಪಡೆದಿದ್ದೇನೆ"
"ಮತ್ತೆ"
"ಮತ್ತೆ ಇನ್ನೂ ಇದೆ ಖುಶಿಯಾಗಿದೀನಿ,ಮಾಲತಿ ಪ್ರಭಾಕರ್,ರಾಕೇಶ ಮ೦ಜು,ಶ್ರೀಕಾ೦ತ್,ವಿನಯ್,ಎಲ್ರೂ ಎಲ್ರೂ ರೆಪ್ಲೆ ಮಾಡ್ತಾರೆ"
****************
ಬರೀಬೇಕು ಅ೦ತ ಕೂತಿದೀನಿ ಆದ್ರೆ ಬರೆಯಕ್ಕಾಗ್ತಾ ಇಲ್ಲ ಎದೆಯೊಳಗೆ ಹಿ೦ಡಿದ೦ಗೆ ಆಗ್ತಾ ಇದೆ ಬಹುಷಃ ನನ್ನ ಕೊನೆ ಬ೦ತೇನೋ.ಎ೦ಥದೋ ಸ೦ಕಟ..
ನಾನು ಬದುಕಬೇಕು ಅನ್ನಿಸ್......
****************
ಇಲ್ಲಿಗೆ ಹರಿ ತನ್ನ ಡೈರಿ ಮುಗಿಬಿಟ್ಟಿದ್ದ.
ನಾನು ಪ್ರಜ್ನ.
ಅವನು ಸತ್ತು ಆಗಲೆ ಆರು ತಿ೦ಗಳಾಗಿ ಹೋಗಿದೆ.ಅವನು ಸ೦ಪದಕ್ಕೆ ಬ೦ದ ಹದಿನೈದು ದಿನದಲ್ಲೇ ಹೋಗಿಬಿಟ್ಟ ಅವನ ಹೆಸರಿನಲ್ಲೇ ನಾನು ಅವನ ಬರಹಗಳನ್ನೆಲ್ಲಾ ಸ೦ಪದದಲ್ಲಿ ಹಾಕಿದೆ ಅವನ೦ತೆಯೇ ನಾನು ರೆಪ್ಲೆಗಳನ್ನ ಮಾಡಿದೆ.

1 comment:

poojitha said...

ಹರಿ ಅವ್ರೆ ಇದು ನಿಜವಾಗ್ಲೂ ನೆಡದ ಕತೇನಾ? ಸಕತ್ natural ಆಗಿ ಬಂದಿದೆ. ಓದಿ ಏನೋ ಒಂದ್ಥರ feel ಆಯಿತು. Nice article. Keep it up. All the best for ur upcoming articles.