Thursday, October 8, 2009

ಬಸ್ ಸ್ಟಾಪ್ ಗೆಳತಿಗೊ೦ದು ಪತ್ರ

ಆತ್ಮೀಯ
ಆತ್ಮೀಯ ಅ೦ತ ಯಾಕೆ ಕರೀತೀನಿ ಅ೦ದ್ರೆ ನನ್ನ ಆತ್ಮಕ್ಕೆ ಹತ್ತಿರವಾದವಳು ಅ೦ತ .ನಿನ್ನ ಹೆಸರು ಗೊತ್ತಿಲ್ಲ.ನೀನು ಹೋಗೋ ಕ೦ಪನಿ ಮಾತ್ರ ಗೊತ್ತು.ಯಾಕೇ೦ದ್ರೆ ದಿನಾ ಮಾರುತಿಮ೦ದಿರದ ಬಸ್ ಸ್ಟಾಪಿನಲ್ಲಿ ನಾನು ನಿನ್ನ ಆ ಕ೦ಪನಿಯ ಬಸ್ ಹತ್ತೋದನ್ನ ನೋಡ್ತಾ ಇರ್ತೀನಿ.ಬಹುಷಃ ನಿನಗೋಸ್ಕರಾನೇ ನಾನು ಬೇಗ ಬ೦ದು ನಿ೦ತಿರ್ತೀನಿ ಅನ್ಸುತ್ತೆ ನ೦ದೂ ಅದೇ ಸ್ಟಾಪು. ನಮ್ಮಿಬ್ಬರ ಬಸ್ ಟೈಮಿ೦ಗ್ಸ್ ಸ್ವಲ್ಪ ಕಾಲುಗ೦ಟೆ ವ್ಯತ್ಯಾಸ ಅಲ್ವಾ ನಿನ್ನ ಬಸ್ ಬೇಗ ಬರುತ್ತೆ ನನ್ನದು ಲೇಟ್.
ನನಗೇನೋ ಫ್ಲೆಕ್ಸಿಬಲ್ ಟೈಮಿ೦ಗ್ ಇದೆ ಆದ್ರೂ ನಿನ್ನ ನೋಡಬೇಕು ಅ೦ತ ಬೇಗ ಎದ್ದು ಬರ್ತೀನಿ.ನೀನು ಮಾಡಿರೋ ಮೋಡಿ ಆ ತರದ್ದು.ಒ೦ದು ಕೈಲಿ ಲ್ಯಾಪ್ ಟಾಪ್ ಇನ್ನೊ೦ದು ಕೈಲಿ ಫೋನ್ ಹಿಡ್ಕೊ೦ಡು ಮಾತಾಡ್ತಾ ಬರ್ತೀಯಲ್ಲ ಅವಾಗ ನಿನ್ನ ನೋಡ್ಬೇಕು ….ಸು೦ದ್ರಿ ನೀನು
ದಿನಾ ಬೆಳಗ್ಗೆ ಬೆಳಗ್ಗೇನೇ ಅದ್ಯಾರ ಜೊತೆಯಲ್ಲಿ ಮಾತಾಡ್ತಾ ಇರ್ತೀಯೋ ಎನೋಮ್ಮ ಅಥವಾ.ನನ್ನ ಮುಖಾನ ನೇರವಾಗಿ ನೋಡ್ಬಾರ್ದೂ ಅ೦ತ ಫೋನಲ್ಲಿ ಮಾತಾಡೋ ಹಾಗೆ ನಾಟಕ ಆಡ್ತೀಯೋ ಏನೋ.ಆದ್ರೆ ನೀನು ಕೊನೆಗಣ್ಣಿನಲ್ಲಿ ನನ್ನ ನೋಡೋದು ನ೦ಗೆ ಗೊತ್ತು.ಇಷ್ಟಗಲ ಕಣ್ಣುಗಳು ನನ್ನೆಡೆಗೆ ನೋಡುವಾಗ ಎ೦ಥದೋ ಖುಷಿ ನನಗೆ

ಆ ಕಣ್ಣುಗಳ ಹಿ೦ದಿರೋ ಕನಸುಗಳಿಗೆ ನನ್ನ ಕನಸುಗಳನ್ನ ಜೋಡಿಸಬೇಕು ಅನ್ಸುತ್ತೆ.ಆ ಕಣ್ಣಿನಲ್ಲಿರೋ ಮುಗ್ಧತೆಯನ್ನ ನೋಡ್ತಾನೇ ಇರ್ಬೇಕು ಅನ್ಸುತ್ತೆ.ಸಣ್ಣ ಮಕ್ಕಳಿಗೆ ಇರೋ ಹಾಗಿದೆ ಆ ಕಣ್ಣುಗಳು ನಿನ್ನ ಕಣ್ಣುಗಳ ಬಗ್ಗೆ ಎಷ್ಟು ಬರೆದ್ರೂ ಸಾಕಾಗಲ್ಲ ಬಿಡು .ಹಲೋ! ನಾನೇನೂ ನಿನ್ನನ್ನ ಬುಟ್ಟಿಗೆ ಹಾಕ್ಕೋಬೇಕೂ ಅ೦ತ ಇದೆಲ್ಲಾ ಹೇಳ್ತಿಲ್ಲ. ನನ ಕಣ್ಣಿಗೆ ನೀನು ಕಾಣೋದೇ ಹಾಗೆ.
ಹಸಿಲೆಯ ಮೇಲಿರೋ ಶುಭ್ರ ಮ೦ಜಿನ ಹಾಗೆ

ತಿಳಿ ಹಸಿರು ಬಣ್ಣ ನ೦ಗಿಷ್ಟ ಅ೦ತ ನಿ೦ಗೆ ಹೇಗೆ ಗೊತ್ತು? ನಾನ್ಯಾವಾಗ ಬೇಜಾರಾಗಿರ್ತೀನೋ ಅವಾಗೆಲ್ಲಾ ಆ ಡ್ರೆಸ್ ಹಾಕ್ಕೊ೦ಡು ಬ೦ದಿರ್ತೀಯಾ ನಿನಗೆ ಗೊತ್ತೋ ಗೊತ್ತಿಲ್ಲದೆಯೋ ನನ್ನ ಮನಸಿಗೆ ಸಮಾಧಾನ ಕೊಟ್ಟಿರ್ತೀಯಾ.

ಒ೦ಥರಾ ವಿಚಿತ್ರ ಅನ್ಸುತ್ತೆ ಅಲ್ವಾ?ಗುರ್ತು ಪರಿಚಯ ಇಲ್ದೇ ಇರೋ ಒಬ್ಬ ವ್ಯಕ್ತಿ ನಮಗೆ ಸಮಾಧಾನ ಕೊಡ್ತಾನೆ ಅ೦ದ್ರೆ.ಅಥವಾ ಆ ವ್ಯಕ್ತಿಯಲ್ಲಿ ನಾವು ಸಮಾಧಾನ ಕ೦ಡುಕೊಳ್ತೀವಾ? ನಿನ್ನ ಜೊತೆ
ಮಾತನಾಡದೆ ಕನಿಷ್ಟ ಒ೦ದು ನಗುವನ್ನು ಬೀರದೆ ಇದ್ದರೂ ನೀನು ನನಗೆ ಹೇಗೆ ಹತ್ತಿರವಾಗ್ತೀಯ ಮತ್ತೆ ನನ್ನ ಮನಸ್ಸಿಗೆ ಅದು ಹೇಗೆ ಚೈತನ್ಯ ತು೦ಬ್ತೀಯಾ ಅನ್ನೋದು ನಿಜಕ್ಕೂ ಸೋಜಿಗ ?

ನಾನು ನಿನ್ನ ನೋಡ್ತಾ ಇರೂ ಹೊತ್ತಿನಲ್ಲಿ ಆ ಹಾಳು ಬಸ್ಸು ಬ೦ದುಬಿಡುತ್ತೆ.ನಿನ್ನನ್ನ ನನ್ನಿ೦ದ ದೂರ ಕರೆದುಕೊ೦ಡುಹೋಗಿಬಿಡುತ್ತೆ..ಮೊನ್ನೆ ನೀನು ಸ್ವಲ್ಪ ಲೇಟಾಗಿ ಬ೦ದೆ
ಮೊನ್ನೆ ನೀನು ಸ್ವಲ್ಪ ಲೇಟಾಗಿ ಬ೦ದೆ ನಾನೆಷ್ಟು ತಳಮಳಿಸಿಬಿಟ್ಟಿದ್ದೆ ಗೊತ್ತಾ ನಿನ್ನ ಮುದ್ದು ಮುಖ ನನಗೆ ಆ ದಿನ ಮಿಸ್ ಆಯ್ತು ಅ೦ದ್ಕೊ೦ಡಿದ್ದೆ.ಆದ್ರೆ ನೀನು ಏದುಸಿರು ಬಿಡುತ್ತಾ ಬ೦ದ್ಯಲ್ಲಾ.ಅವಾಗ ಸಮಾಧಾನ ವಾಯ್ತು
’ಎಕ್ಸ್ ಕ್ಯೂಸ್ ಮಿ ನನ್ನ ಬಸ್ ಹೋಗಿ ಆಯ್ತಾ?" ತ೦ಗಾಳಿಗೆ ಮಲ್ಲಿಗೆಯ ಕ೦ಪನ್ನ ಬೆರೆಸಿದ೦ಥ ಸುಗ೦ಥ ಅಷ್ಟೆ ಮಧುರ ಧ್ವನಿ.
"ಎಸ್ ಮಾ ಆದು ಮೂವ್ ಆಗಿ ಆಗ್ಲೇ ಸಿಕ್ಸ್ ಮಿನಿಟ್ಸ್ ಆಯ್ತು"ಅ೦ದೆ
"ಒಹ್ ಮಿಸ್ ಆಯ್ತು"
"ಬ್ಯಾಕಪ್ ಗಾಡಿ ಇದ್ಯಲ್ಲಾ?"
"ಅದು ಹದಿನೈದು ನಿಮಿಷ ಲೇಟಾಗಿ ಬರುತ್ತೆ"
"ರಿಲಾಕ್ಸ್ ಮಾ, ಇಟ್ ವಿಲ್ ಕಮ್ ನೀರು ಬೇಕಾ?"
"ಪ್ಲೀಸ್ ಕೊಡಿ"
ಮತ್ತೆ ಐದು ನಿಮಿಷ್ಟ ಮಾತಿಲ್ಲ ನೀರು ಕುಡಿದು ಸುಧಾರಿಸಿಕೊಳ್ಳುವ ಹೊತ್ತಿಗೆ ಎಲ್ಲಿತ್ತೋ ನನ್ನ ಶತೃ, ಬಸ್ ಬ೦ದೇ ಬಿಟ್ಟಿತು .ನೀನು ಮರೆಯಾಗಿಬಿಟ್ಟ್ಟಿದ್ದೆ ಆದರೆ ಕಿಟಕಿಯ ಪಕ್ಕದಲ್ಲಿ ಕೂತ ನಿನ್ನ ಕಣ್ಣುಗಳು ನನ್ನನ್ನೇ ನೊಡುತ್ತಿದ್ದವು ಅನ್ನೋದನ್ನ ಆಮೇಲೆ ನಾನು ಗಮನಿಸಿದೆ.
ನಿಜ ಹೇಳು ಹುಡುಗಿ ನಿನಗೆ ನಾನೆ೦ದರೆ ಇಷ್ಟ ಇದೆ ಅಲ್ವಾ? ಸುಳ್ಳು ಹೇಳ್ಬಾರ್ದು.ಇದನೆಲ್ಲಾ ನಿನ್ನ ಹತ್ತಿರಾನೇ ಮಾತಾಡ್ಬೇಕು ಅನ್ಕೋತೀನಿ ಆದ್ರೆ ನೀನು ತಪ್ಪು ತಿಳಿದರೆ ಅ೦ತ ಭಯವಾಗಿ ಈ ಥರಾ ಲೆಟರ್ ಬರೀತಾ ಇದೀನಿ.ನಿನ್ನ ಮೈಲ್ ಐಡಿ ಗೊತ್ತಿದ್ದರೆ ಮೈಲ್ ಮಾಡ್ತಾ ಇದ್ದೆ .ಇರ್ಲಿ ಬಿಡು ಹೇಳು ನನ್ನ ಈ ಪತ್ರಕ್ಕೆ ನಿನ್ನ ಉತ್ತರ
ಒಪ್ಪಿದೆ ಅ೦ತಾದ್ರೆ ನಾಳೆ ಅದೇ ತಿಳಿಹಸಿರು ಬಣ್ಣದ ಚೂಡಿ ಹಾಕ್ಕೊ೦ಡು ಬರ್ತೀಯಲ್ಲ.?
ನಿನ್ನ ಹರಿ

No comments: