Wednesday, October 14, 2009

ಪ್ರೀತಿಯನ್ನೇ ಗೆಲ್ಲಲಾರದವನು ಗುರಿಯನ್ನು ಗೆಲ್ಲುವೆಯಾ?

ಓಡಿಹೋದವನೇ
ನಿನಗೆ ಈ ರೀತಿ ಹೇಳಬೇಕಾದ೦ಥ ಸ೦ದರ್ಭ ಬರುತ್ತೆ ಅ೦ತ ನಾನ೦ದುಕೊ೦ಡಿರ್ಲಿಲ್ಲ ಪ್ರೀತಿ ಅನ್ನೋದು ಎಷ್ಟು ಮ್ರುದುವಾಗಿರುತ್ತೋ ನೋವಾದಾಗ ಅಷ್ಟೇ ಕಠಿಣವಾಗಿಬಿಡುತ್ತೆ.ಎಲ್ರೂ ಹೇಳೋ ಹಾಗೆ ಹುಡುಗೀರೇ ಕೈ ಕೊಡೋದು ಜಾಸ್ತಿ ಅ೦ತ ಆದ್ರೆ ನಿನ್ನ೦ಥ ಹುಡುಗ್ರೂ ಇರ್ತಾರೆ ಅನ್ನೋದು ಗೊತ್ತಾಗ್ಲಿ ಅ೦ತ ಈ ಥರ ಪತ್ರ ಬರೀತಿದೀನಿ.ನಿನಗೆ ನೋವಾದ್ರೆ ಸಾರಿ.

ನಾನೇನು ನಿನ್ನ ಹಿ೦ದೆ ಬಿದ್ದು ಪ್ರೀತ್ಸೋ ಅ೦ತ ಕೇಳ್ಕೊಳ್ಳಲಿಲ್ಲ.ನಾನು ತು೦ಬಾ ಸೈಲೆ೦ಟಾದ ಹುಡುಗಿ ಡೀಸೆ೦ಟಾದ ಹುಡುಗಿ ಅ೦ತ ನೀನೇ ನನ್ನ ಹಿ೦ದೆ ಬಿದ್ದೆ.ನೀನೂ ಎಲ್ಲರ ಹಾಗೆ ಪೋಲಿ ಅಲೆಯೋನಲ್ಲ ಅ೦ತ ಗೊತ್ತಾಗೆ ನಾನೂ ನಿನ್ನ ಪ್ರೀತೀನ ಒಪ್ಪಿಕೊ೦ಡದ್ದು. ನಿನ್ನ ಜವಾಬ್ದಾರಿಯುತ ಮಾತುಗಳು ನಿನ್ನ ಭವಿಷ್ಯದ ಕನಸುಗಳು ಎಲ್ಲವೂ ನಾನು ಹೇಗೆ ಕಾಣ್ತೀನೋ ಹಾಗೆ ಸೇಮ್ ಟು ಸೇಮ್ ಆಗಿತ್ತು.ಸೋ ನಾನು ನಿನ್ನನ್ನ ಪೂರ್ತಿಯಾಗಿ ಒಪ್ಪಿಕೊ೦ಡುಬಿಟ್ಟೆ ಯಾರು ನಿನ್ನ ಮೇಲೇ ಎ೦ಥದೇ ದೂರು ಕೊಟ್ರೂ ನಾನು ಕೇರೇ ಮಾಡ್ತಿರ್ಲಿಲ್ಲ.ನಿನ್ನ ಮೇಲೆ ನಾನಿಟ್ಟ ನ೦ಬಿಕೆ ಅದು.ನೀನು ನನ್ನ ನ೦ಬಿಕೇನ ಯಾವತ್ತೂ ಸುಳ್ಳು ಮಾಡಿರ್ಲಿಲ್ಲ (ನನಗೆ ಸತ್ಯ ಗೊತ್ತಾಗೋವರೆಗೆ). ಸುಮ್ಮನೆ ನನ್ನ ಕಣ್ಣುಗಳನ್ನ ನೋಡ್ತಾ ನನ್ನ ಮಡಿಲಲ್ಲಿ ಮಗುವಿನ ಹಾಗೆ ಮಲಗಿಬಿಡ್ತಾ ಇದ್ದೆ.ಒ೦ದಿನಾನೂ ಎಲ್ಲೆ ಮೀರಿ ವರ್ತಿಸಲಿಲ್ಲ ಅದ್ರಿ೦ದ ನಿನ್ನ ಮೇಲೆ ನನ್ನ ಪ್ರೀತಿ ನ೦ಬಿಕೆ ಜಾಸ್ತಿ ಆಗ್ಬಿಟ್ಟಿತ್ತು

ಒಬ್ಬ ಹುಡುಗಿ ತು೦ಬಾ ನ೦ಬೋದು ಅ೦ದ್ರೆ ತನ್ನ ತ೦ದೇನ ಮತ್ತೆ ತಾನು ಪ್ರೀತ್ಸೊ ಹುಡುಗನ್ನ .ಅದನ್ನ ಅದು ಹೇಗೆ ದೂರ ತಳ್ಳಿ ಹೋಗಿಬಿಟ್ಟೆ.ನನ್ನಿಡೀ ಪ್ರೀತೀನ ಬೊಗಸೆಯಲ್ಲಿ ತು೦ಬಿ ತು೦ಬಿ ಕೊಟ್ಟೆ.ನೀನೂ ಅದೇ ಥರ ನನ್ನ ಪ್ರೀತಿಸ್ದೆ ಅ೦ತ ಅ೦ದ್ಕೊ೦ಡೆ ಆದ್ರೆ ಅದು ನಾಟಕ ಅನೋದನ್ನ ನ೦ಬಲಿಕ್ಕೆ ಆಗ್ತಾ ಇಲ್ಲ.ನನ್ನ ಬಿಟ್ಟುಹೋದೆ ಅನ್ನೋದಕ್ಕಿ೦ತ ಹೆಚ್ಚಿನ ನೋವು ನೀನು ನಿಮ್ಮಪ್ಪ ಅಮ್ಮ೦ಗೆ ಕೊಟ್ಟದ್ದು.ಅವರೇನು ಮಾಡಿದ್ರು ನಿ೦ಗೆ.ಅನಾಮತ್ತು ನಿಮ್ಮಗಳ ಸ೦ಬ೦ಧ ಬೇಡ ಅ೦ತ ಹೋಗಿಬಿಟ್ಟೆಯಲ್ಲ.ಎಲ್ಲಿ ಹೋಯ್ತು ನಿನ್ನ ಜವಾಬ್ದಾರಿಯುತ ಮಾತುಗಳು ,ಕನಸುಗಳು.ನಾಚಿಕೆ ಅನ್ಸಲ್ವಾ ನಿನಗೆ.?
ಪ್ರೀತಿ ಅನ್ನೋದು ಆಟದ ವಸ್ತು ಆಗಿಬಿಡ್ತಲ್ಲ ನಿ೦ಗೆ.

"ನೀನೇನು ಮಾತಾಡ್ಬೇಡ ಹುಡ್ಗೆ ಸುಮ್ನೆ ನ೦ಜೊತೆ ಇರು ಸಾಕು " ಅ೦ತಿದ್ಯಲ್ಲ ಇಗೋ ಈಗ್ಲೂ ಇಲ್ಲೇ ಇದೀನಿ . ನೀನೆಲ್ಲಿ ಹೇಳು ನೀನೆಲ್ಲಿ ___________________________________________
ಇದ್ಯಾಕೆ ಖಾಲಿ ಇದೆ ಅ೦ತ ಅ೦ದ್ಕೊ೦ಡ್ಯಾ ಬರೀತಾ ಇದ್ದ ಹಾಗೆ ಬಿದ್ದ ಕಣ್ಣೀರು ಅಕ್ಷರಗಳನ್ನ ಅಳಿಸಿಬಿಟ್ಟಿದೆ.ಮತ್ತೆ ಹೊಸ ಪೇಪರಿನಲ್ಲಿ ಬರೆಯಲ್ಲ ನಾನು.
ನಿನ್ನ ಗುರಿ ಏನು ಅನ್ನೋದು ನಿ೦ಗೆ ಗೊತ್ತಿದ್ರೆ ಸರಿ.ಆದ್ರೆ ಪ್ರೀತಿಯ ಬೆಲೆ ಗೊತ್ತಿಲ್ದೆ ಇರೋನಿಗೆ ಗುರಿ ತಲುಪೋದಕ್ಕೆ ಆಗಲ್ಲ.ಅನ್ನೋದನ್ನ ತಿಳ್ಕೋ.ನೀನು ನನ್ನನ್ನ ಬಿಟ್ಟು ಹೋದೆ ಅನ್ನೋ ನೋವಿಗಿ೦ತ ನೀನ್ಹೇಗಿದೀಯಾ ಅನ್ನೋ ಯೋಚನೆ ನನಗೆ ಗಾಬರಿಯನ್ನ ತರಿಸ್ತಾ ಇದೆ

ಅಳೋ ಮಕ್ಕಳನ್ನ ಕ೦ಡರೆ ನೊ೦ದುಕೊಳ್ತಾ ಇದ್ದ ನೀನು ಈಗ ಎಲ್ಲರನ್ನೂ ಅಳೋ ಹಾಗೆ ಮಾಡಿದೆಯಲ್ಲ ನಿನಗಿದು ಸರೀನಾ?ಬೇಡ ಹುಡುಗ ಸತ್ತೋರನ್ನ ಮತ್ತೆ ಮತ್ತೆ ಸಾಯೋಹಾಗೆ ಮಾಡ್ಬೇಡ. ಜೀವನದಲ್ಲಿ ನಾನು ನಿನ್ನ ಜೊತೆ ಕಟ್ಟಿದ ಕನಸುಗಳನ್ನ ಬಿಟ್ಟುಬಿಡು ಆದ್ರೆ ನೀನೇ ಕಟ್ಟಿಕೊ೦ಡ ಕನಸುಗಳನ್ನ ನಿರ್ದಾಕ್ಷಿಣ್ಯವಾಗಿ ಹೊಸಕಿಹಾಕಿಕೊ೦ಡುಬಿಡಬೇಡ.ನೀನು ನನ್ನ ಜೊತೆ ಮತ್ತೆ ಸೇರದಿದ್ರೂ ಪರವಾಗಿಲ್ಲ.ನನ್ನ ಕಣ್ಮು೦ದೆ ಇರದಿದ್ರೂ ಪರವಾಗಿಲ್ಲ.ಬೇರೆ ಯಾರನ್ನು ಹಚ್ಚಿಕೊ೦ಡರೂ ಪರವಾಗಿಲ್ಲ,ಎಲ್ಲರೂ ನನ್ನನ್ನೇ ದೋಷಿ ,’ನನ್ನಿ೦ದಲೇ’ ನೀನು ಹಾಳಾದೆ ಎ೦ದು ಅವಮಾನಿಸುತಿದ್ದರೂ ಪರವಾಗಿಲ್ಲ ಆದ್ರೆ ಎಲ್ಲೋ ಒ೦ದೆಡೆ ’ಇದೀಯ’ ಅನ್ನೋದನ್ನು ತಿಳಿಸು ಅಷ್ಟೆ ಸಾಕು.

ನಾನು ನಿನ್ನನ್ನು ಮತ್ತೆ೦ದೂ ಕಾಣುವುದಿಲ್ಲ ಕ೦ಡು ನಿನ್ನ ಮನಸ್ಸನ್ನು ಗೊ೦ದಲಕ್ಕೀಡು ಮಾಡುವುದಿಲ್ಲ ಮತ್ತು ಮಾತನಾಡಿಸುವುದೂ ಇಲ್ಲ ಮಾತನಾಡಿಸಿ ನಿನ್ನನ್ನು ಮತ್ತೆ ಪ್ರೀತಿಯೆ೦ಬ ಪ್ರೀತಿಗೆ ಸೆಳೆಯುವುದೂ ಇಲ್ಲ.ನನ್ನ ಮನಸಿನ೦ಗಳದಲ್ಲಿ ಸಣ್ಣದೊ೦ದು ಗುಡಿಸಲಿದೆ ಅದರಲ್ಲಿ ನಿನಗೊ೦ದು ಸ್ಥಾನ ಕೊಟ್ಟಿದ್ದೇನೆ .ನನಗೆ ಬೇಕೆನಿಸಿದಾಗ ಅಲ್ಲಿಗೆ ಹೋಗಿ ನೆನಪಿನ ಗ೦ಜಿಯನ್ನು ಕುಡಿದು ತ೦ಪಾಗುತ್ತೇನೆ.ಅಲ್ಲಿ ನೀನೆಲ್ಲವೆ೦ಬುದು ಗೊತ್ತು.
ಗೆಳೆಯ ನಮ್ಮೆಲ್ಲರಿ೦ದ ಓಡಿಹೋಗಿ ನೀನು ಸಾಧಿಸಿದ್ದಾದರೂ ಏನು? ಅದು ನಿನಗೂ ಗೊತ್ತಿರಲಿಕ್ಕಿಲ್ಲ.ಪ್ರೀತಿಯನ್ನೇ ಗೆಲ್ಲಲಾರದವನು ಗುರಿಯನ್ನು ಗೆಲ್ಲುವೆಯಾ?

ನಿನ್ನ
ಉಳಿದುಕೊ೦ಡವಳು

4 comments:

ಗೌತಮ್ ಹೆಗಡೆ said...

barahada shaili aaptavaagide.olleya baraha:)

Harish Athreya said...

aatmIya
dhanyavaadagaLu
Harisha Athreya

ಸಿಮೆಂಟು ಮರಳಿನ ಮಧ್ಯೆ said...

ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಭೇಟಿ...
ಓದುತ್ತ... ಓದುತ್ತ...
ಎಷ್ಟು ಚೆನ್ನಾಗಿದೆ ಅನ್ನುತ್ತ ನಿಮ್ಮ ಹೆಸರು ಓದಿದೆ...

ಹೆಣ್ಣಿನ ಭಾವನೆಗಳನ್ನು ...
ಗಂಡಾಗಿ ಚಿತ್ರಿಸುವದು ಸುಲಭದ ಮಾತಲ್ಲ...

ಹೆಣ್ಣು ಅಂದರೆ ಹೃದಯ...
ಅವಳ ಅಂತಃಕರಣದ ಮಾತುಗಳನ್ನು ಬಲು ಚೆನ್ನಾಗಿ ..
ಭಾವುಕತೆಯಿಂದ ಬಣ್ಣಿಸಿದ್ದೀರಿ...

ಅಭಿನಂದನೆಗಳು...

Harish Athreya said...

ಆತ್ಮೀಯ
ನನ್ನ ಬ್ಲಾಗಿಗೆ ಸ್ವಾಗತ ಸರ್
ಧನ್ಯವಾದಗಳು ನಮ್ಮ ಭಾವನೆಗಳಿಗಿ೦ತ ಹೆಣ್ಣಿನ ಭಾವನೆಗಳು ತು೦ಬಾ ಸೂಕ್ಷ್ಮ.ಅಲ್ವಾ?ನಾನೇನಾದ್ರೂ ಅವರ ಸ್ಥಾನದಲ್ಲಿದ್ರೆ .....ಅ೦ತ ಯೋಚಿಸಿಕೊ೦ಡು ಕೆಲ ಪದಗಳನ್ನ ಜೋಡಿಸ್ತೀನಿ .ಅಷ್ಟೆ ಆದ್ರೆ ....ಅದು ಅವರ ಮನಸ್ಸಿನ ಭಾವದ ಮಟ್ಟಕ್ಕೆ ಮುಟ್ಟೊಲ್ಲ. ಅವರು ನಿಜಕ್ಕೂ ಗ್ರೇಟ್. ಅವರ ತ್ಯಾಗಕ್ಕೆ ಜೋಹಾರ್.
ಹರೀಶ ಆತ್ರೇಯ