Wednesday, October 21, 2009

ಇವನಾ ಅವನು?

ಇವನಾ ಅವನು?
ಅವನಾ ಇವನು?


ಕಡಗೋಲನು ಪಿಡಿದು
ಚಿನ್ನಾಟವಾಡಿದವನು
ತಾಯಿ ದೇವಕಿಯ
ತೊಡೆಯೇರಿದವನು


ತನ್ನ ಪುಟ್ಟಬಾಯಲ್ಲಿ
ಬ್ರಹ್ಮಾ೦ಡ ತೋರಿದವನು
ವಿಷ ಕನ್ಯೆ ಪೂತನಿಗೆ
ಮೋಕ್ಷವನಿತ್ತವನು


ಗೋವರ್ಧನ ಗಿರಿಯೆತ್ತಿ
ಯಾದವರ ಕಾಯ್ದವನು
ಮಾವ ಕ೦ಸನ ತುಳಿದು
ತಾಯ್ತ೦ದೆಯರುಳಿಸಿದವನು


ಪಾ೦ಡವರೈವರಿಗೆ
ಅಭಯವನಿತ್ತವನು
ಪಾರ್ಥಗೆ ಗೀತೆಯ
ಒಲವಿ೦ದ ಬೋಧಿಸಿದವನು


ಜಗದೊಳಗೆ ತಾನೊ೦ದೆ
ಬ್ರಹ್ಮರೂಪನೆ೦ದವನು
ಶ್ರೀ ಗುರು ಶ೦ಕರನ
ಭಜ ಗೋವಿ೦ದನಿವನು

No comments: