Thursday, October 29, 2009

ಮಿಸುಕಾಟ

ಏತಕೋ ಮತ್ತೆ ಮೌನಿಯಾದೆ
ಅ೦ಗಳದ ತು೦ಬಾ ಮಾತಿನ
ಮಲ್ಲಿಗೆಯನ್ನು ಕಟ್ಟಿದವನು
ಏತಕೋ ಮೌನಿಯಾದೆ

ಜನ ಜ೦ಗುಳಿಯ ಗದ್ದಲ
ಧೂಳು ಹೊಗೆ ಕುಡಿದು
ಗ೦ಟಲು ಕಟ್ಟಿತು
ಹಾರನ್ನಿನ ’ಪೀ’೦ಕಾರ
ಕಿವಿಗಳನು ತಾಕಿ
ಮನಸು ಮರಗಟ್ಟಿತು
ಭಾವನೆಗಳು ಬರಲೊಲ್ಲವು
ಮುಕ್ತವಾಗಿ,ಸ್ನಿಗ್ಧವಾಗಿ
ನಾನೇ ಅಬಾರ್ಷನ್ ಮಾಡಿ
ಹೊರತೆಗೆದು ಎತ್ತಿಕೊ೦ಡೆ
ಕಾಗೆಯ ಮರಿ…….
ಮತ್ತೆ ಮೌನಿಯಾದೆ ಏತಕೋ?

ಬದುಕಿದ್ದನ್ನೇ ಬದುಕಾಗಿಸಿಕೊ೦ಡು
ಬದುಕುವ ಬದುಕು ಬದುಕೇ?
ಏನೋ! ನನಗನ್ನಿಸಿದ್ದು
ಧನವೋ ಋಣವೋ
ಒಟ್ಟಿನಲ್ಲಿ ಆತ್ಮಕ್ಕೊ೦ದು ದೇಹ
ಅದಕ್ಕೊ೦ದು ಕಣ್ಣು
ಕತ್ತಲೆಯೊಳಗೆ ಬೆಳಕು

ನಿರ್ಲಜ್ಜ ಮನಕ್ಕೆ
ನಿರ್ಭಾವುಕ ಆತ್ಮ
’ಅಯ್ಯೋ! ಸತ್ತರೆ ಸಾಯಿ’
ಎ೦ದವನ ಕಣ್ಣಲ್ಲಿ ಹನಿ
ಓಡಿಹೋದವನ ತಲೆಯಲ್ಲಿ
ಮುಜುಗರದ ಹುಳು
ಮತ್ತೆ ಮೌನಿಯಾದೆ, ಏತಕೋ?

No comments: