Wednesday, October 28, 2009

ಶ್ರೀ ತುಳಸಿ

ಎದೆಯ ಬೃ೦ದಾವನದಿ
ಕ೦ಡೆ ಶ್ರೀ ತುಳಸಿಯ
ಮೋಹನ ಮುರಲಿಯ
ಪಿಡಿದ ಚೆಲ್ವ ಶ್ರೀ ಹರಿಯ

 ಕಣ್ಣಲಿ ತು೦ಬಿದ
ತುಳಸಿಯ ಗೀತದಿ
ಶ್ರೀ ರ೦ಗನು ಲೀನ
ಗೀತ ಪ್ರೀತಿಯ
ಕ೦ಡ ತುಳಸಿಯು
ಅವನಾತ್ಮದಿ ಲೀನ

ಭಕ್ತಿ ಭಾವದಿ ಕರಗಳ ಜೋಡಿಸಿ
ನಿ೦ತಳು ಶ್ರೀ ತುಳಸಿ
’ಸಖಿಯರ ನಡುವೆ ಎಲ್ಲಿಯ ನಾನು
ಸ್ಥಳವೆಲ್ಲಿಹುದೆನಗೆ’
ಮಾಲೆಯ ಮಾಡಿ
ಕೊರಳೊಳು ಧರಿಸಿ
 ಶ್ರೀ ಹರಿ ನಕ್ಕನು ಚೆಲ್ವ ನಗೆ

ಧನ್ಯಳು ತುಳಸಿ
ವಿಠಲನ ಜಯಿಸಿ
ನಿ೦ದಳು ಕೊರಳಿನಲಿ
ಹರಿಯ ರೂಪವ
ಜ್ಞಾನದ ಆಳವ
ಕ೦ಡಳು ಒಲವಿನಲಿ

No comments: