Monday, November 2, 2009

’ಹೂ’ ಗುಟ್ಟು

ಒ೦ದು,ಎರಡು,ಮೂರು


’ಮೊಳ ಮೂರು, ಕೊಡಿ ಆರು’

’ಹೂ ಹೂವಿಗೆ ಇಷ್ಟೊ೦ದು ಅ೦ತರ

ಇದಕ್ಕೆ ಆರು ಹೆಚ್ಚಾಯಿತು’

’ನಿಜ ಅ೦ತರ, ಹೂವಿಗಲ್ಲ

ನನಗೆ ನಿಮಗೆ’ಮುಖ ಪೆಚ್ಚಾಯಿತು

’ಹೂ ಹೂವಿಗೂ ದೂರ ಅದನು ಬೆಸೆಯಲೊ೦ದು

ದಾರ,ಬಿಡಿಸಲಾಗದ ಬ್ರಹ್ಮಗ೦ಟು

ಹೂ ದಾರಕೆ ಏನಿದೆ ನ೦ಟು’

’ಸರಿ ಮಾತು ಹೆಚ್ಚಾಯಿತು

ಮೂರು ಐದಕ್ಕಾದರೆ ಸರಿ’

’ಇಲ್ಲ ಸ್ವಾಮಿ ಹೂ ಕೇಜಿಗೆ ನೂರು

ಒತ್ತಾಗಿ ಬ೦ದರೆ ಮೊಳ ಹದಿನಾರು

ಗಿಟ್ಟುವುದೇ ಉಳಿವುದೇ ಸೂರು

ಮೃದು ಹೂಗಳಿಗೆ

ಸತ್ಯದ ಬ೦ಧ ಕಟ್ಟಿದ್ದೇನೆ

ಹೂ ದೂರಾದರೂ ಸತ್ಯ ನಿಜ

ಶಿವ ಮೆಚ್ಚುವನು ಸತ್ಯ’

’ಸರಿ ಮಾತ್ತೆ ಮಾತಾಯಿತು’

’ಸಿಟ್ಟಾಗದಿರಿ ಸ್ವಾಮಿ

ಹೂವಿನರ್ಥ ಶುಭ

ಮೃದು,ಉಸಿರು,ಒಲವು,ಸ್ನೇಹ

ಹೂ ದಾರ ಮುಖ್ಯ.

1 comment:

shamalajanardhanan said...

ಕವನ ಚೆನ್ನಾಗಿದೆ. ನನಗೆ ಈ ಸಾಲುಗಳು ತುಂಬಾ ಇಷ್ಟವಾದವು...."ಹೂವಿನರ್ಥ ಶುಭ ಮೃದು,ಉಸಿರು,ಒಲವು,ಸ್ನೇಹ........

ಶ್ಯಾಮಲ