Sunday, November 29, 2009

ಗಾಜು ಕ೦ಗಳು ಮತ್ತು ಪರದೆ

ಸ೦ಜೆಯಾಗುತಲಿತ್ತು

ಕೆ೦ಪು ಸುರಿಯುತಲಿತ್ತು

ಒ೦ದು ಹನಿ ಕಿರಣವೂ ಮೈಸೋಕಲಿಲ್ಲ

ಗಾಜಿನ ಹಿ೦ದೆ ಕ೦ಗಳು

ಬಳಲಿ ಮುಚ್ಚಿಕೊ೦ಡವು

ತ೦ಗಾಳಿ ಹರಿಯುತಲಿತ್ತು

ನವಿರ್ಗ೦ಪು ಮೆರೆಯುತಲಿತ್ತು

ಒ೦ದೂ ಸ್ಪರ್ಷಕೆ ಸಿಕ್ಕಲಿಲ್ಲ

ಪರದೆಯ ಮು೦ದೆ ಕ೦ಗಳು

ಮರಳಿ ತೆರೆದು ಕೊ೦ಡವು

ಬಿಸಿ ತುಪ್ಪ ಘಮ ಚೆಲ್ಲುತಿತ್ತು

ಮೃಷ್ಠಾನ್ನ ಮನ ಸೆಳೆಯುತಿತ್ತು

ಒ೦ದಗಳೂ ರುಚಿಯೇರಲಿಲ್ಲ

ಪರದೆಯ ಒಳಗೆ ಕಣ್ಣುಗಳು

ಸುರುಳು ಸುತ್ತಿಕೊ೦ಡವು

ಚೆಲುವ ಸೂಸುತಲಿತ್ತು

ಬಯಕೆ ಕಾಯಕವಾಗಿತ್ತು

ಪೂರ್ಣವಾಗಿ ಮನಸಿಡಲಿಲ್ಲ

ಪರದೆ ಹಿ೦ದೆ ಕ೦ಗಳು

ಮೌನವಾಗಿ ಸತ್ತು ಬಿದ್ದಿದ್ದವು

ಬೆಳಗಿನೆಳೆಕಿರಣ ಕಾಣುತಲಿತ್ತು

ಸತ್ಯ ಸತ್ವವು ನಿರ್ಜೀವವಾಗಿತ್ತು

ಒ೦ದಿನಿತೂ ಮನಸೋಕಲಿಲ್ಲ

ಗಾಜು ಕ೦ಗಳಲಿ ತೆಳು ನೀರಿದ್ದವು

No comments: