Monday, November 30, 2009

ರದ್ದಿ ಕಾಗದದೊಳಗೆ

ರದ್ದಿ ಕಾಗದದೊಳಗೆ


ಪ್ರೇಮಿಗಳಿಬ್ಬರ ಆತ್ಮಹತ್ಯೆ

ಧನಿಕನೊಬ್ಬನ ದಾರುಣ ಹತ್ಯೆ

ಸಿನಿಮಾ ನಟನೊಬ್ಬನ

ಕಚ್ಚೆ ಹರಕುತನ

ವೇಶ್ಯೆಯೊಬ್ಬಳ ಮಾನಹರಣ

ದಿಬ್ಬಣಕೆ ಹೊರಟಿದ್ದ ಗಾಡಿ

ದಿಬ್ಬದಿ೦ದ ಬಿದ್ದು ಒ೦ದಿಷ್ಟು ಸಾವು

ನಾಯಿಬಾಲ ನೆಟ್ಟಗಾಗಿರುವ ಸುದ್ದಿ

ಬೂದಿ ಉದುರಿಸಿದ ಭಗವ೦ತ

ಇವೆ ಮಾಮೂಲು ನ್ಯೂಸುಗಳು

ರದ್ದಿ ಕಾಗದ ಬಲು ಘಾಟು

ಅದರೊಳಗೆ ಉಪ್ಪಿಟ್ಟು ರವೆ

ಸುತ್ತಿಕೊಟ್ಟವನಿಗೆ ಶಪಿಸಿದೆ

ಇ೦ದಿನ ಪೇಪರಿನಲ್ಲಿ

ಒ೦ಬತ್ತನೆ ಕ್ಲಾಸಿನ ಹುಡುಗಿ

ಪ್ರಿಯತಮನೊ೦ದಿಗೆ ಪಲಾಯನ

ಭಯೋತ್ಪಾದಕರ ದಾಳಿ,ಸಾವು.

ನೈತಿಕ ’ಹೊಣೆ’ ಹೊತ್ತು ರಾಜೀನಾಮೆ

ಕೊಡಲಿ ಎ೦ದ ರಾಜಕಾರಣಿ

ಪರ್ದೇ ಕೇ ಪೀಛೆ ಗಮ್ಮತ್ತು

ಪಾಶ್ಚಾತ್ಯ ಧ್ಯಾನ ಕಾರ್ಯಕ್ರಮ

ಮತ್ತದೇ ನ್ಯೂಸು

ಹೊಸ ಪೇಪರ್

No comments: