Tuesday, December 1, 2009

ಅಭಿಸಾರಿಕೆ

ಚುಕ್ಕಿ ತಾರೆಗಳು ರೆಪ್ಪೆಯುಳಗೆ


ಇಳಿದಿವೆ ಕಣ್ಣಾಗಿ

ಮಿ೦ಚುತಿದೆ ತೊದಲ್ನುಡಿಯಾಗಿ

ಚಿಕ್ಕ ಹೆಜ್ಜೆಯನಿಟ್ಟು

ಓಡಿಯಾಡುವವಳಿಗೆ

ಬಳಲಿಕೆಯೇ ಇಲ್ಲ

ಬಿದ್ದು, ಅತ್ತಾಗಲೂ ಅಪ್ಸರೆ.

ಏನಾಶ್ಚರ್ಯ!

ಅತ್ತು ಸೊರಗಿದ ಕಣ್ಣಲ್ಲಿ

ಅಚ್ಚರಿಯ ಭಾವ

ನಿಮಿಷದೊಳಗೆ ಅತ್ತು ನಗುವ

ಕಲೆ ಇವಳೆಗೇ ಗೊತ್ತು

ನವರಸ ನಾಯಿಕೆ ಇವಳು

ಬಿಸಿಲಿನ ಬೇಗೆಗೆ ತ೦ಪಾಗುವಳು

ಒಮ್ಮೊಮ್ಮೆ ತಾನೇ

ಉರಿಬಿಸಿಲಾಗುವಳು

ಬಾ! ಎ೦ದರೆ ಬಾರಳು.

ತನ್ನಿಚ್ಚೆ ಇದ್ದಾಗ ಬ೦ದಾಳು

ತೀಕ್ಷ್ಣ ನೋಟದ ಚ೦ದ್ರಿಕೆ

ನಿಜ ಸಖಿ ನಿತ್ಯ ಸುಖಿ.

ಸತ್ಯದೆ ಇವಳು ಅಭಿಸಾರಿಕೆ

No comments: