Tuesday, December 1, 2009

ಮಾಲೆ

ಮಾಲೆ


ಕನಸುಗಳ ಹೆಣೆದು

ಮಾಲೆಯಾಗಿಸಿದ್ದೇನೆ

ನನ್ನ ಕೊರಳಿಗೆ ನನ್ನವೇ

ಕನಸುಗಳು

ಒಮ್ಮೊಮ್ಮೆ ನಾನೇ

ಕನಸಾಗಿದ್ದೇನೆ

ಭಾವನೆಗಳ ಹಿಡಿಯಲು

ಹೋಗಿ ಹೆಣವಾಗಿದ್ದೇನೆ

ನಾ ಸತ್ತು ವರ್ಷಗಳಾಯ್ತು

ಆದರೂ ಬದುಕಿದ್ದೇನೆ

ಬದುಕು ಬರಡಾಗಿ

ಅಲ್ಲೊಮ್ಮೆ ಇಲ್ಲೊಮ್ಮೆ

ಪ್ರೀತಿ ಚಿಲುಮೆ ಕ೦ಡರೂ

ಅದು ಮರೀಚಿಕೆ

ನಾ ಹಿಡಿಯಲಾರೆ

ಅದೂ ಸುಗುವುದಿಲ್ಲ, ಕನಿಕರಿಸಿ

ಚುಚ್ಚು ನುಡಿಗೆ ಬೆಚ್ಚಿ ಬಿದ್ದು

ಬೆಚ್ಚಗೆ ಮಲಗಿದ್ದೇನೆ

ಮತ್ತೆ ಕನಸುಗಳ ಹೆಣೆಯುತ್ತಾ

ಮಾಲೆ ಕಟ್ಟುತ್ತಾ.

No comments: