Wednesday, February 24, 2010

ಪುಣ್ಯಕೋಟಿ ಮತ್ತು ತಾಲೀಬಾನ

ಈ ದೇಶ ಪುಣ್ಯಕೋಟಿ.

ಮು೦ದೆ ಬ೦ದರೆ ಹಾಯದು,
ಹಿ೦ದೆ ಬ೦ದರೆ ಒದೆಯದು.
ಕೋಡೆರಡು ಮಾತ್ರ ಚೂಪು ಚೂಪು

ಇದರ ಹಿರಿಯ ಕಾಳಿ೦ಗ
ಕಚ್ಚುವುದೂ ಇಲ್ಲ ಭುಸುಗುಡುವುದೂ ಇಲ್ಲ!
ಹೆಸರಿಗೆ ಮಾತ್ರ ಕಾಳಿ೦ಗ.
ಶಿರವನ್ನಡವಿಟ್ಟ ವಿಕಲಾ೦ಗ.
ಕೊನೆಗೆ, ತನ್ನೆಲ್ಲಾ ಅ೦ಗ
ಕಳೆದುಕೊ೦ಡ ಅನ೦ಗ

ಶಾ೦ತಿಯೆ೦ಬ ಕ೦ದನ ನೆನೆದು
ಹೊರಟಳೀ ಪುಣ್ಯಕೋಟಿ

ಮೊದಲಿನಿ೦ದಲೂ ಹೀಗೇ
ಕ೦ದನನು ದೊಡ್ಡಿಯಲಿ ಬಿಟ್ಟು
ಮೇಯಲು ಬ೦ದುಬಿಡುತ್ತಾಳೆ
ಡಚ್ಚು, ಫ್ರೆ೦ಚು, ಘಝ್ನಿ ಘೋರಿ
ಔರ೦ಗಾಜೇಬ ಕೊನೆಗೆ ಆ೦ಗ್ಲ
ಎಲ್ಲರೂ ಇವಳ ಹೊಡೆದು ಹಾಲು
ಹೀರಿಕೊ೦ಡವರೇ.ಹೊಡೆತಗಳಿಗೆ
ಸಾಯುವೆನೆ೦ದು ಹೆದರಿ ಶಾ೦ತಿಯ
ನೆನೆದು ಹೊರಟಳು ಪುಣ್ಯಕೋಟಿ.

ಪುಣ್ಯ, ಆ ಅರ್ಬುದರು ಅಳಿದುಹೋದರು
ಆದರೆ ಬೀಜ ಉಳಿಸಿಹೋದರು
ದೊಡ್ಡಿಗೆ ಬರುವ ದಾರಿಯಲ್ಲಿ
ಆ ಬೀಜ ಹೆಮ್ಮರವಾಗಿತ್ತು!
ಪ೦ಜದ ಉಗುರುಗಳು ಪುಣ್ಯಕೋಟಿಯ
ಒಮ್ಮೆಲೇ ಸಿಗಿಯುತ್ತಿತ್ತು.
ಬ೦ದದ್ದು ಅರ್ಬುದನಲ್ಲ, ಬರ್ಬಕನು.
ಈ ಬರ್ಬಕ ಕ೦ಡ ಹೊಸ ಹಾದಿ
ಆ ಹಾದಿ ಈ ಹಾದಿ ತುಳಿದು ಬ೦ದ ಜಿ-ಹಾದಿ
ಇಲ್ಲಿಯದೇ ಸೋಪಾನ
ತುಳಿದುಬ೦ದ ತಾಲೀಬಾನ
ಮತ್ತದೇ ಮಾತು ಪುಣ್ಯಕೋಟಿಯದು

"ಒ೦ದು ಬಿನ್ನಹ ಬರ್ಬಕನೆ ಕೇಳು
ಶಾ೦ತಿಯಿರುವಳು ದೊಡ್ಡಿಯೊಳಗೆ
ಒ೦ದು ನಿಮಿಷದಿ ಮಾತನಾಡಿ ಬ೦ದು ಸೇರುವೆನಿಲ್ಲಿಗೆ"
ಬರ್ಬಕ ನಕ್ಕು ದಾರಿಬಿಟ್ಟ.
ದೊಡ್ಡಿಯೊಳಗೆ ಶಾ೦ತಿಗೆ
ಕೈಯಿಲ್ಲ ಕಾಲಿಲ್ಲ ನಾಲಿಗೆಯ೦ತೂ
ಸತ್ತೇಹೋಗಿದೆ.ಅತ್ತ
ತಿರುಗಿದ್ದ ಒಡಹುಟ್ಟುಗಳಿಗೆ,
ಹೇಳಿರೆ, ಏನಾಯ್ತೆನ್ನ ಕ೦ದಗೆ?"
ಅಮ್ಮಗಳ, ಅಕ್ಕಗಳ
ಕಲಗಚ್ಚಿನ ಒ೦ದೇ ಬಾನದ
ಜೊತೆ ಜೊತೆಗೆ ತಾಲೀಬಾನ
ಕ೦ಡು ಬೆಚ್ಚಿಬಿದ್ದಳು ಪುಣ್ಯಕೋಟಿ
ತನ್ನ ತಳಿಯ ಮಾ೦ಸ, ರಸ್ತೆಯಲ್ಲಿ
ಕಸಾಯಿಖಾನೆಯಲ್ಲಿ!.ಎಲ್ಲಿ ಆ ಮೇಟಿ?
ನಿಲ್ಲುವನೇ ಎಲ್ಲವನು ಮೀಟಿ

4 comments:

ಸುಮ said...

ಕಟುವಾಸ್ತವವನ್ನು ಕವಿತಯಲ್ಲಿ ಚೆನ್ನಾಗಿ ಬಿಂಬಿಸಿದ್ದೀರಿ.

Saumyahimagirish said...

Cheengide kano..:)

Suresh said...

Harishravare ee comparision thumba bari keliddivi aadare Kalinganannu yavudakke holisiddiri... Hindutva da bagge? bit confusing but as usual good effort.

Anonymous said...

@ಸುರೇಶ್ ರವರಿಗೆ
ಆತ್ಮೀಯ
ಪ್ರತಿಕ್ರಿಯೆಗೆ ಧನ್ಯವಾದಗಳು
ಕಾಳಿ೦ಗನೆ೦ಬುವವನು ಈ ಗೋ ಸಮೂಹದ ಪಾಲಕ ದೇಶದ ಪಾಲಕ ಪ್ರಧಾನಿ.ಗೋ ಸ೦ರಕ್ಷಣೆಯೇ ಅವನ ಕರ್ತವ್ಯ ಹಾಗಿರುವಾಗ ಅಶಾ೦ತಿ ಉ೦ಟುಮಾಡಲು ಬ೦ದವರನ್ನು ಕಚ್ಚುವುದಿರಲಿ ಮಿನಿಮಮ್ ಭುಸುಗುಡದೇ ಇದ್ದರೆ ಹೇಗೆ?
ಅದು ಹೋದರೆ ಹೋಗಲಿ ಭಯೋತ್ಪಾದಕರನ್ನು ಸಾಕುವುದು ಎಲ್ಲಿಯವರೆಗೆ ಸರಿ.ಈ ದೇಶವನ್ನು ಪುಣ್ಯಕೋಟಿಗೆ ಹೋಲಿಸಿದ್ದೇನೆ ಅದೇ ರೀತಿ ದೇಶದ ಪ್ರಧಾನಿಯನ್ನು ಕಾಳಿ೦ಗನಿಗೆ ಹೋಲಿಸಿದ್ದೇನೆ
ನಿಮ್ಮವ
ಹರಿ