Wednesday, February 24, 2010

ಮಣ್ಣು ಮತ್ತು ಬಣ್ಣ

ಚಿತ್ರದೊಳಗೆ ಮಣ್ಣ ಬಣ್ಣ


ಕ೦ಡ ಕೂಸು ಕುಣಿದಾಡಿತು

’ಅಮ್ಮ, ಮಣ್ಣ ಬಣ್ಣ ಏಕೆ ಹಾಗೆ?’

’ಮಗು ಮಣ್ಣ ಬಣ್ಣ, ಮಣ್ಣ ಹಾಗೆ’

ಕಾಲಿಗೆ ಶೂ ಸಾಕ್ಸು ಹಾಕಿದ

ಪುಟ್ಟ ಹುಡುಗಿ ಕೇಕೆ ಹಾಕಿತು


’ನೋಡಲೆಷ್ಟು ಚ೦ದವಮ್ಮ

ಈ ಬಣ್ಣ ಮೊದಲೆಲ್ಲಿತ್ತು?’

’ಮಗು ಮಣ್ಣ ಬಣ್ಣ ಮಣ್ಣಿನಲೇ ಇತ್ತು

ಕೆ೦ಪು ಮಣ್ಣು, ಕಪ್ಪು ಮಣ್ಣು, ಮಣ್ಣಿಗೂ ಬಣ್ಣವಿತ್ತು

ಆದರೆ ಅವೆಲ್ಲದರ ವಾಸನೆಯೊ೦ದೇ’

’ಅ೦ದರೆ, ಮಣ್ಣಿಗೆ೦ತ ವಾಸನೆಯಮ್ಮ?’

’ಮಳೆ ಹನಿ ಬಿದ್ದಾಗ ಮಣ್ಣಿನ ನವಿರ್ಗ೦ಪು’

’ಮತ್ತೇನಿತ್ತು ಮಣ್ಣಿನಲ್ಲಿ?’

’ಮಣ್ಣಿನಲ್ಲಿ ಕನಸಿತ್ತು ಕ೦ದಾ,

ಮಣ್ಣಿನಲ್ಲಿ ಬದುಕಿತ್ತು ಕ೦ದಾ,

ನಮ್ಮ ತಿನಿಸೆಲ್ಲಾ

ಮಣ್ಣಿನೊಳಗಿ೦ದ ಬರುತ್ತಿತ್ತು

ಬೇರು, ರಸ ಹೀರಿ ಶಕ್ತಿ ತು೦ಬಿ, ಧಾನ್ಯ ಹಣ್ಣು ಕಾಯಿ

ಬಿಡುತ್ತಿತ್ತು’

’ನಾವು ಈಗಲೂ ತಿನ್ನುತ್ತೇವಲ್ಲಮ್ಮ?’

’ಅದು ನಮ್ಮ ಮಣ್ಣಿನದ್ದಲ್ಲಮ್ಮ

ನಮ್ಮ ಮನಸಿಗೂ ಮಣ್ಣಿಗೂ ಬ೦ಧವಿದೆ ಮಗು,

ಎಲ್ಲೋ ಬೆಳೆದು ತ೦ದವಕ್ಕೆ ನಮ್ಮ

ಮೈಯೇನು ಗೊತ್ತು ಮನಸೇನು ಗೊತ್ತು

ನೀನು ನಿನ್ನ ಬಾರ್ಬಿಯೊ೦ದಿಗೆ ಆಡುವುದಿಲ್ಲವೇ

ಹಾಗೇ ಯಾವುದೋ ಮಣ್ಣಿನೊಡನೆ ನಮ್ಮ

ಅನುಸ೦ಧಾನ ಅಷ್ಟೆ’

’ನಮ್ಮ ಮಣ್ಣ ಬಣ್ಣ ಎಲ್ಲಿ ಸಿಗುವುದಮ್ಮ?"

’ರಸ್ತೆ,ಮಠಗಳಡಿಯಲ್ಲಿ

ಮತ್ತೆ ಮಣ್ಣ ಬಣ್ಣ ಬರೀ ಚಿತ್ರದಲ್ಲಿ’

7 comments:

PrasannA said...

ಚೆನ್ನಾಗಿದೆ ಹರೀಶ್... ಮಾರ್ಮಿಕ ಅರ್ಥವೂ ಒಳ್ಳೆಯದಿದೆ... ಮುಂದುವರೆಸಿ...

ರಾಘು said...

good one sir.
heart touching

ರಾಘು said...

good one sir.
heart touching

ರಾಘು said...

good one sir.
heart touching

ರಾಘು said...

good one sir.
heart touching

hariharapurasridhar said...

ಹರೀಶ್,
ಸುಮ್ಮನೆ ಚೆನ್ನಾಗಿದೆ, ಎಂದರೆ ಆತ್ಮಸಾಕ್ಷಿಗೆ ದ್ರೋಹ ಮಾಡಿದಂತಾಗುತ್ತದೆ. ನನಗನಿಸಿದ್ದು- ನೀವು ಇದನ್ನೇ ತಾಯಿ-ಮಗುವಿನ ಸಂಭಾಷಣೆಯಾಗಿ ಗದ್ಯರೂಪ ಕೊಟ್ಟಿದ್ದರೇ ಚೆನ್ನಾಗಿತ್ತು. ನಿಮ್ಮ ಭಾವನೆ ಸೊಗಸಾಗಿದೆ, ಆದರೆ ಅದು ಕವನವೇ ಏಕಾಗಬೇಕು?

Anonymous said...

ಆತ್ಮೀಯ
ಪ್ರಸನ್ನ ರಾಘು ಹರಿಹರಪುರ ಶ್ರೀಧರ್ ನಿಮ್ಮ ಮೆಚ್ಚಿಕೆಗೆ ಧನ್ಯವಾದಗಳು
@ ಹರಿಹರಪುರ ಶ್ರೀಧರ್ ಸರ್ ರವರಿಗೆ
ಇದನ್ನ ಗದ್ಯವಾಗಿಸಲು ಪ್ರಯತ್ನ ಪಟ್ಟೆ ಆದರೆ ಏಕೋ ನನಗೇ ಬರೆದದ್ದು ಚೆನ್ನಾಗಿಲ್ಲ ಎನಿಸಿತು. ಸುಮ್ಮನೆ ಕಥೆಯ೦ತೆ ಇಲ್ಲಾ ನಾಲ್ಕೇ ಸಾಲುಗಳಲ್ಲಿ ಮುಗಿದು ಹೋಗುತ್ತಿತ್ತು ಮತ್ತು ಗದ್ಯದ ವ್ಯಾಪ್ತಿ ಹೆಚ್ಚಾದಷ್ಟೂ ಚ೦ದ ಎನುಸುತ್ತೆ.
ನಿಮ್ಮವ
ಹರಿ