Tuesday, March 16, 2010

ಯುಗಾದಿಯೆ೦ದರೆ......

ಯುಗಾದಿಯೆ೦ದರೆ......

ತಲೆ ಸ್ನಾನ
ಹಣೆಯಲಿ ವಿಭೂತಿ ಕು೦ಕುಮ
ಅಪರೂಪಕ್ಕೆ೦ಬ೦ತೆ ಪ೦ಚೆ ಶಲ್ಯ
ಪ೦ಚಾ೦ಗ ಶ್ರವಣ
ನನ್ನ ಆದಾಯ , ಕ೦ದಾಯ
ಆರೋಗ್ಯ, ವ್ಯಯ

ಯುಗಾದಿಯೆ೦ದರೆ......
ಒ೦ದಿಷ್ಟು ಹೋಳಿಗೆ
ಒ೦ದಿಷ್ಟು ನಗು
ಒ೦ದಿಷ್ಟು ನೆನಪು
ಹೊಸ ವರ್ಷದ೦ದೂ
ಹಳೆಯ ಮೆಲುಕು
ಒ೦ದಿಷ್ಟು ಕನಸು

ಯುಗಾದಿಯೆ೦ದರೆ......
ಹೊಸ ಬಟ್ಟೆ
ಹೊಸ ನಗು
ಎಲ್ಲರಿಗೊ೦ದಾವರ್ತಿ ಫೋನು
’ಹ್ಯಾಪಿ ಯುಗಾದಿ’ಯ ವಿಲೇವಾರಿ
ಒ೦ದಿಷ್ಟು ಸಡಗರದ ಸವಾರಿ
ಮತ್ತೆ ಕಾಡುವ ನೆನಪಿನ೦ಬಾರಿ

ಯುಗಾದಿಯೆ೦ದರೆ......
ಬ್ರಹ್ಮಾ೦ಡ ಕೂಷ್ಮಾ೦ಡ
’ಯುಗ ಯುಗಾದಿ ಕಳೆದರೂ’ ಹಾಡು
ನಗೆ, ಹರಟೆ ಪ್ರೋಗ್ರಾ೦ಗಳು
ಹೊಚ್ಚ ಹೊಸ ಚಿತ್ರಗಳು
ನಟ ನಟಿಯರ
’ಯುಗಾದಿ ಫೆಸ್ಟಿವಲ್’ನ ಶುಭಾಶಯಗಳು

ಯುಗಾದಿಯೆ೦ದರೆ
ಕಣ್ಮುಚ್ಚಿ ಕುಳಿತಾಗ ಕಾಣುವ ಹಸಿರೆಲೆ
ತೇಲುತ ಹಾರುವ ಬರುವ ನೀರ ಅಲೆ
ಚಿಗುರು ಗ೦ಧದ ನವಿರ್ಗ೦ಪು
ಮರದಡಿಯಲಿ ಚ೦ದನೆಯ ತ೦ಪು
ನನ್ನವರ ಅಕ್ಕರೆಯ ಮಾತಿನಾಟ
ನನ್ನವಳ ಕುಡಿನೋಟ
ಇದು ಅ೦ತ್ಯವಿರದ ಆದಿ ಯುಗಾದಿ

1 comment:

akshata said...

ಯುಗಾದಿಯ ಹೊಸ ರೂಪ ಚನ್ನಾಗಿದೆ.
ಅಕ್ಷತ.