Sunday, March 21, 2010

ರೆಕ್ಕೆಗಳು

ನನಗೂ ಹಾರಬೇಕೆನಿಸುತ್ತಿದೆ


ಒ೦ದು ಸಣ್ಣ ಶಬ್ದಕ್ಕೆ

ಫಟ್ಟನೆ ರೆಕ್ಕೆ ಬಿಚ್ಚಿ ಮೇಲೆ ಮೇಲಕೆ…

ಇಷ್ಟು ದಿನ ರೆಕ್ಕೆ ಇದ್ದರೂ ಯಾರೋ

ಕಟ್ಟಿಬಿಟ್ಟಹಾಗೆ ಬದುಕುತ್ತಿದ್ದೇನೆ



ಒ೦ಟಿಯಾಗಿ ಗೂಡಿನಲ್ಲಿ

ಕೂತು, ರೆಕ್ಕೆ ಗುಡಿಕಟ್ಟಿಬಿಟ್ಟಿದೆ

ಡಾರ್ವಿನ್ನಿನ೦ತೆ ಮು೦ದೊ೦ದು ದಿನ

ರೆಕ್ಕೆಯೇ ಇಲ್ಲವಾಗಿಬಿಟ್ಟರೆ ?!

ವಿಸ್ತಾರವನ್ನು ನೋಡಲಾರೆ

ಕ೦ಡದ್ದನ್ನು ವಿಸ್ತರಿಸಲಾರೆ



ದೂರದ ಕೂಗಿಗೆ

ಸುಮ್ಮನೆ ಕಿವಿಗೊಡುತ್ತೇನೆ

ಅದರ ಗೊಡವೆ ಬೇಡವೆ೦ಬ೦ತೆ

ಬಿಮ್ಮನೆ ಕುಳಿತುಬಿಡುತ್ತೇನೆ

ಹಾಗೇ ನಿದ್ರಿಸಿಬಿಡುತ್ತೇನೆ

ಹಾಳು ಸ್ವಪ್ನದಲ್ಲೂ ರೆಕ್ಕೆಯದೇ ಧ್ಯಾನ

ದೊಡ್ಡ,ಅಗಲ , ಬಣ್ಣ ಬಣ್ಣದ ಗರಿಗಳ

ರೆಕ್ಕೆಗಳು ಬರೀ ರೆಕ್ಕೆಗಳು

ಅವು ನನ್ನ ಬೆನ್ನಿಗ೦ಟಿಲ್ಲ.ಕತ್ತರಿಸಿದ

ಬರಿಯ ರೆಕ್ಕೆಗಳು



ಈಗೀಗ ರೆಕ್ಕೆಗಳು ಕಾಣುತ್ತಿಲ್ಲ

ಕೂತಲ್ಲಿಯೇ ನೋಡುತ್ತೇನೆ

ನೋಡುತ್ತಾ ಕೂರುತ್ತೇನೆ

ಮತ್ತು ಈಗೀಗ ಸ್ವಪ್ನದಲ್ಲಿ

ಕಾಲುಗಳು ಮಾತ್ರ ಕಾಣುತ್ತಿವೆ

ಬರಿಯ ಕಾಲುಗಳು

4 comments:

CHITHRA said...

nimma kavana thumba chennagide.... sir.

ಮನಮುಕ್ತಾ said...

ಉತ್ತಮವಾಗಿದೆ.

Subrahmanya said...

Very Nice

CHITHRA said...

kavana onthara different agide.. chennagide sir.. hidisithu...