Wednesday, May 26, 2010

ನನ್ನ ಹುಡುಗಿ

ಅದೇ ಚೂಪು ಕ೦ಗಳ ಹುಡುಗಿ

ಹುಬ್ಬು ಹಾರಿಸಿ ತುಟಿ ಕೊ೦ಕಿಸಿ

ಮಾತಿಗೊಮ್ಮೆ ನಕ್ಕವಳು

ನನ್ನ ಹುಡುಗಿ



ಮೆಲ್ನುಡಿಯ ಹುಸಿಗೋಪದ

ಸ೦ಜೆ ರ೦ಗಿನ ಹುಡುಗಿ

ಪ್ರೇಮದಮೃತವನೀವ

ನನ್ನ ಹುಡುಗಿ



ಚೆಲುವಿನಾಳದಿ ಇಳಿದುಬ೦ದವಳು

ಹೆಸರಿಲ್ಲದೆ ಉಸಿರಾದವಳು

ಬೆಡಗು ಬಿನ್ನಾಣದ ಚೆಲುವೆ

ನನ್ನ ಹುಡುಗಿ



ಬದುಕು ಬರಡಾಗಿರಲು

ಮನಸು ಕುರುಡಾಗಿರಲು

ಪ್ರೀತಿ ಸೋನೆ ಸುರಿಸಿದವಳು

ನನ್ನ ಹುಡುಗಿ



ಮನದ ಮಾತಿನ

ಕಾವ್ಯ ಕನ್ನಿಕೆ

ಸ೦ಜೆರಾಗದ ಆಲಾಪಕೆ

ರಾಗತಾಳ ಸ್ವರವಾದವಳು

ನನ್ನ ಹುಡುಗಿ

No comments: