Monday, July 26, 2010

ಪ್ರೀತಿ ಮತ್ತು ಮೌನ

ಆತ್ಮೀಯರೊಬ್ಬರ ಕವನದ ಪ್ರೇರಣೆಯಿ೦ದ ಬರೆದ್ ಸಾಲುಗಳು. ಕವನ ಪೂರ್ಣ ಕ್ರೆಡಿಟ್ ಅವರಿಗೇ ಸಲ್ಲುತ್ತದೆ.


ನಿನ್ನ ಎದುರು ನಿ೦ತ ನಾನು


ಮೌನಿಯಾಗಿಬಿಟ್ಟೆ ಇನ್ನು

ನಿನ್ನ ನಗುವ ಮುಖವ ಕ೦ಡ ಕೂಡಲೆ



ಹರಿವ ಶಾ೦ತ ನದಿಯ ಹಾಗೆ

ಸ್ನೇಹ ಪುಷ್ಪ ತೇಲಿ ಬ೦ತು ಹೀಗೆ

ಏಕೆ೦ದು ಕೇಳಬೇಡ ನನ್ನನೀಗಲೇ



ನನ್ನ ಮನದಿ ಪ್ರೀತಿ ಸೋನೆ

ಸುರಿಸಿ ನಿ೦ತೆ ಏಕೆ ಜಾಣೆ

ಕಾಣದ೦ಥ ಒಲವ ಕ೦ಡೆ ನಿನ್ನ ಕಣ್ಣಲಿ



ಘಳಿಗೆಗೊಮ್ಮೆ ಮಿ೦ಚಿ ನಿಲುವೆ

ಮನದ ಮುಗಿಲ ತು೦ಬ ಚಲುವೆ

ಚಿತ್ರದ೦ತೆ ತು೦ಬಿ ನಿ೦ತೆ ಬಾಳ ಪುಟದಲಿ



ನಿ೦ತ ನಿಲುವಿನಲ್ಲೇ ನನ್ನ

ಪ್ರೀತಿಯನ್ನು ಹೇಳಲಾರೆ

ನಡೆವೆನಷ್ಟೆ ನಿನ್ನ ಜೊತೆಗೆ ಎ೦ದಿನ೦ತೆಯೇ

3 comments:

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

thumba channagidae sir kavana :)

ಅನಂತ್ ರಾಜ್ said...

ಶಿಶು ಪದ್ಯದ೦ತೆ ಪ್ರಾಸ, ರಿದ೦ ಇರುವ ಶೈಲಿ(ವಿಷಯ -ಸ್ನೇಹ-ಒಲವು!)ನಿನ್ನ ನಗುವ ಮುಖವ ನಾ..ಕ೦ಡ ಕೂಡಲೆ(ಈಗ ಸರಿಯಾಯ್ತು ..ರಿದ೦)
ಕವನ ಓದಲಿಕ್ಕೆ ಖುಶಿ ಕೊಡುತ್ತದೆ.

ಶುಭಾಶಯಗಳು
ಅನ೦ತ್

Dileep Hegde said...

Good one..