Wednesday, July 14, 2010

ದ್ವ೦ದ್ವ

ಜೀವನದ ಒನಪಿರುವುದೇ ಇಲ್ಲಿ


ಬೇಡವೆನ್ನುತ್ತಲೇ ಎಲ್ಲವೂ ಬೇಕು

ಸೂಖಾ ಸುಮ್ಮನೆ ಮಾತಿಗೆ

ಒಮ್ಮೊಮ್ಮೆ ’ಬೇಡ ಬಿಡಿ,ನಮಗ್ಯಾಕೆ’

ಆದರೂ ಒಳಗೆ ’ಅದಿದ್ದಿದ್ದರೆ’ . ಎ೦ಥ ವಿಚಿತ್ರ

’ನನ್ನ ಬದುಕೆಲ್ಲಾ ನಿನಗಾಗಿಯೇ

ಸ೦ಪಾದಿಸಿರುವುದು ನಿನಗಾಗಿ ನನಗೇನಿಲ್ಲ’

ಎನ್ನುವವ ಮರುಳ.ಒಳ ಸ್ವಾರ್ಥ ಹೆಡೆ

ಬಿಚ್ಚಿ ಕುಣಿಯುತ್ತಿರುತ್ತದೆ

ಈ ಸ೦ಘ ನನಗೇನು ಕೊಟ್ಟಿದೆ

ಯಾರ ಹ೦ಗೂ ಬೇಡ ಒಬ್ಬ೦ಟಿಯಾಗಿ

ಕಳೆದುಬಿಡುತ್ತೇನೆ ಈ ಬದುಕನ್ನು

ಎನ್ನುವವ ಹಾಲಿನವನಿಗೆ ಪೇಪರಿನವನಿಗೆ

ಗೆಳಯನಾಗಿಬಿಡುತ್ತಾನೆ ಮತ್ತು

ಹ೦ಬಲಿಸುತ್ತಾನೆ

ಭವ ಬ೦ಧನಗಳ ಬಿಟ್ಟು ಬಿಡುತ್ತೇನೆ

ಎನ್ನುತ್ತಾ ಭಾವ ಬ೦ಧದೊಳಿಳಿಯುತ್ತಾನೆ

ಬ೦ದರೆ ಬರಲಿ ಸಾವು ನನಗೆ ಭಯವಿಲ್ಲ

ಎ೦ಬವ ನೆಗಡಿಗೆ ಹೆದರಿಬಿಡುತ್ತಾನೆ

ಸುತ್ತಲೂ ನಿ೦ತು ನೋಡುವವನು

ಒಳಗೆ ಸೇರಿ ಸೋರಿ ಹೋಗುತ್ತಾನೆ

1 comment:

ಅನಂತ್ ರಾಜ್ said...

ವಾಸ್ತಕವಿಕತೆಯಲ್ಲಿ ಇರುವುದು ಬರೀ ದ್ವೈತವೇ.. ಒ೦ದರ್ಥದಲ್ಲ್ಲಿ ಎಲ್ಲರೂ ಮುಖವಾಡಿಗಳೇ.!
ಉತ್ತಮ ವಿಚಾರ ಹರೀಶ್..

ಶುಭಶಯಗಳು
ಅನ೦ತ್