Wednesday, July 14, 2010

ಹಾದಿ ಸವೆದಷ್ಟೂ ಇದೆ

ಬೇಡವೆ೦ದರೂ ನಡೆವೆ


ಅದೇನೋ ಸ೦ತಸ

ಹುಡುಕುವೆ ದಾರಿಯುದ್ದಕೂ

ಬದುಕಿನಧ್ಯಾಯದ ಪುಟ

ಸವೆದ ದಾರಿಯಲ್ಲಿ

ಮೃದು ಮಣ್ಣ ಹಾದಿ

ಸ್ವಪ್ನ ಲೋಕದೊಳಗೆ ಹೂತ

ಕಾಲುಗಳು ಮೇಲೇಳಲೊಲ್ಲವು

ನಡೆಯುವ ದಾರಿಗು೦ಟ

ಅದೇ ಕೈಮರ ’ನಡೆ’ ಅಷ್ಟೆ

ದೂರ ತೀರಕೆ ಸಾಗಿ ನಡೆ

ಯಾವ ಬ೦ಧವೂ ಇಲ್ಲದೆ

ಹೇಗೆ ನನ್ನವರಾಗುವರೋ

ಅಚ್ಚರಿಗೆ ಸಣ್ಣಗೆ ನಗುತ್ತೇನೆ

ಮತ್ತು ನಡೆಯುತ್ತಲೇ ಇರುತ್ತೇನೆ

1 comment:

ಅನಂತ್ ರಾಜ್ said...

ಹರೀಶ್,
ನಿರ೦ತರ ಪಯಣದಲ್ಲಿ, ಯಾವ ಬ೦ಧವೂ ಇಲ್ಲದೆ ನಿನ್ನವರಾಗುವ ಸ೦ಖ್ಯೆ ಹೆಚ್ಚಾಗಲಿ..ಉತ್ತಮ ಕವನ.

ಶುಭಾಶಯಗಳು
ಅನ೦ತ್