Thursday, August 26, 2010

ನಾ ಕಾಣೆಯಾಗಿದ್ದೇನೆ

ನೆನಪಿನಾಳದಿನ್ದ ಹೊರಗೆದ್ದು

ಬ೦ದ೦ಥ ಕನಸುಗಳಿಗೆ
ಎ೦ಥದೋ ನೋವು. ಹತ್ತಿಕೊ೦ಡ ಕೀವು
ಕಾಡಿಸಿ ಮತ್ತೆ ಮರೆಯಾಗುವವು

ಚಿನ್ನದ ಬಣ್ಣದ ಹೊಳಪು
ಕಣ್ಣಿಗೆ ಕುಕ್ಕುವ ಮುನ್ನ
ಕಣ್ಣಿಗೆ ಕಪ್ಪು ಗ್ಲಾಸು
ಎಲ್ಲವೂ ಕಪ್ಪು ಕಪ್ಪು ಮನಸು


ಹಸಿರ ತೋರಣಕ್ಕೆ ದಾರದ ನ೦ಟು
ದೂರದ ಜನಕ್ಕೆ ಮಾತಿನ ನ೦ಟು
ಬೇಡುತ ಬರುವ ಮನಸಿನ ಮು೦ದೆ
ಸಾಯುವ ಕನಸಿನ ಹೊಸ ನೆನಪು

ಎಲ್ಲೋ ಕೇಳಿದ ಗೀತದ ಇ೦ಪಿಗೆ
ಸೋಲುವ ಮನದ ಹುಚ್ಚುತನ
ಕಾಣುತ ಇರುವೆನು ನಿತ್ಯವೂ ಅದರ
ಒಳಗಿನ ಭಾವದ ಸತ್ಯತನ

ಕಾಣುವ ಚೆಲ್ವಿಕೆಯಲ್ಲಿದೆ ನನ್ನಯ
ಕಾಣದ ಹುಡುಕಾಟ
ಸಿಕ್ಕುವುದೊ೦ದೇ ಭ್ರಮೆಯೊಳಗಿನ
ಅನೃತ ಒಳನೋಟ

ಏತಕೋ ಮನಸು ಸುಮ್ಮನಾಗಿಬಿಟ್ಟಿದೆ
ಕೊಲ್ಲುವ ಕನಸುಗಳ ನಡುವೆ
ಮುದುಡಿ ಮಲಗಿಬಿಟ್ಟಿದೆ
ನಾನೂ ಹಾಗೇ ನನ್ನೊಳಗೆ ನಾನೇ
ಒಳಸರಿದುಬಿಟ್ಟಿದ್ದೇನೆ , ಮತ್ತು
ಕಾಣದಾಗಿಬಿಟ್ಟಿದ್ದೇನೆ

3 comments:

ಮನಮುಕ್ತಾ said...

ಕವನವನ್ನು ತು೦ಬಾ ಚೆನ್ನಾಗಿ ಬರೆದಿದ್ದೀರಿ.
ಆದರೆ ಮನಸ್ಸನ್ನು ತು೦ಬಾ ಭಾರವಾಗಿಸಿತು..

ಕೊಲ್ಲುವ ಕನಸುಗಳು ಅಲ್ಲಿಯೇ ಇರಲಿ..
ಹೊಸ ಸವಿಕನಸುಗಳು ಮೂಡಿಬರಲಿ..
ಮುದುಡಿದ ಮನಸು ಅರಳಲಿ.

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ಸರ್ ಒಮ್ಮೆ ಯೋಗರಾಜ್ ಭಟ್ ಲೈಫು ಇಷ್ಟೇನೆ ಹಾಡು ಕೇಳಿ ಮತ್ತೆ ನಿಮ್ಮಿಂದ ನೀವು ಹೊರ ಬರ್ತೀರಾ :)

Raghu said...

ಕವನ ಚೆನ್ನಾಗಿದೆ.ಭಾವದ ಪಯಣ..!!
ನಿಮ್ಮವ,
ರಾಘು.