Sunday, August 29, 2010

ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)



ಒ೦ದಿಷ್ಟು ಕೂಡಿ ಕಳೆಯೋಣ ಬಾರs


ಹೂವಿಗೆ ಗ೦ಧ ಕೂಡಿದರೆ ಬರುವ ಮೊತ್ತವೆಷ್ಟೋ
ಗೀತೆಯೊಳಗಿನ ಭಾವವ ಕಳೆದರೆ ಉಳಿವುದೇನೋ


ಎ೦ದಿಗೂ ಹೊ೦ದದ ಮ೦ದೆಯೊಳಗೆ ಬ೦ದುಳಿದವರಾರು?
ಮೂರು ಮತ್ತೊ೦ದು ಇನ್ನೊ೦ದು ಉರುಳಿದಾಗ ನಾನಿಲ್ಲ
’ಆತ್ಮನ ಏಷ ಪ್ರಾಣೋ ಜಾಯತೇ’. ಪ್ರಾಣ ಹೋಗಿತ್ತು


ಸುಮ್ಮನೆ ಜೊತೆಗೂಡಿ ಎಲ್ಲೋ ಕಳೆದುಹೋಗೋಣ ಬನ್ನಿ
ಲೆಕ್ಕದ ಲೆಪ್ಪ ನೋಡಿ ತಲೆತಿರುಗು ಬೇಡ.
ಶೂನ್ಯದೊಳಗೆ ಒ೦ದು ಐಕ್ಯವಾದರೆ ಉಳಿದದ್ದು ಸೊನ್ನೆ
ಆ ಒ೦ದು ನಾನೋ, ನೀನೋ, ಅವನೋ, ಅವಳೋ, ಯಾರೋ

2 comments:

AntharangadaMaathugalu said...

ಚೆನ್ನಾಗಿದೆ ಹರೀ... ಕೊನೆಯ ಸಾಲುಗಳ ಒಳ ಅರ್ಥ ಮಾರ್ಮಿಕವಾಗಿದೆ....

ಶ್ಯಾಮಲ

ಮನಮುಕ್ತಾ said...

ತು೦ಬಾ ಚೆನ್ನಾಗಿದೆ.