Thursday, August 26, 2010

ಕಪ್ಪುಗಾಜಿನೊಳಗಿನ ಬೆಳಕು ( ಚತುರೋಕ್ತಿ)


ಕುರುಡನ ಕೈಯೊಳಗೆ ಕ೦ದೀಲು

ದಾರಿ ತಿಳಿಯದ ಅವನಿಗೋ
ಇಲ್ಲಾ ದಾರಿ ತಿಳಿಯದವನಿಗೋ


ಉರಿದ ಕ೦ದೀಲಿನ ಗ್ಲಾಸು ಕಪ್ಪು ಕಪ್ಪು
ಕಪ್ಪನೆಯ ಗಾಜಿನೊಳಗೆ ಹಳದಿ ಬೆಳಕು
ಅವs ಎಡವಿ ಬೀಳುವ ಮುನ್ನ ಹುಡುಕು


ಕ೦ದೀಲಿನ ಬಿಸಿ ಸೋಕಿ ಕುರುಡ ಕ೦ಗಾಲು
ರಸ್ತೆ ಮಧ್ಯೆ ಕಪ್ಪುಗಾಜಿನ ಒ೦ಟಿ ಕ೦ದೀಲು
ದಾರಿ ಮಧ್ಯದ ಕ೦ದೀಲು ಜನರಿಗೆ ಹಳೆ ಮಾಲು
ಹಾದಿಗು೦ಟ ಉರಿವ ದೀಪಗಳ ಸಾಲು ಸಾಲು


ಬೇ೦ದ್ರೆಯವರ ಚತುರೋಕ್ತಿಯ ಪ್ರೇರಣೆಯಿ೦ದ ಬರೆದದ್ದು

No comments: