Wednesday, September 1, 2010

ಪ್ರಶ್ನಾತೀತರು(?) (ಚತುರೋಕ್ತಿ ೬)



ಪಾದದಡಿಯ ಮಣ್ಣು ಕುಸಿಯುತಿದೆ



ವಾಮನರೇ ಎಲ್ಲ, ಒ೦ದು ಕಾಲು ಮೇಲೆ

ಇನ್ನೊ೦ದು ಕಾಲು ಭೂಮಿಯೊಳಗೆ



ಮಣ್ಣ ಮೂರ್ತಿ, ಕಣ್ಣು ಹೊಡೆದು

ನಮ್ಮೆದುರು ನಿ೦ತಿದೆ, ಕತೃಗಳು ನಾವೇ

ನಿಜ ದೇಹ ಅವಿತು ಕೇಕೆ ಹಾಕುತ್ತದೆ



ಅಸ್ತಿತ್ವ, ವ್ಯಕ್ತಿತ್ವ, ಸತ್ತು ಒಳಗೇ ಕೊಳೆತು ನಾತ.

ಪ್ರಶ್ನೆಗಳಿಲ್ಲದ ಬದುಕು ಬದುಕೇ?

ಕೆಸರವಿಗ್ರಹಕ್ಕೆ ಪೂಜೆ. ಅಸಹ್ಯ!

ಕೇಳುವುದೆ೦ದರೆ ನಮಗೆ ಅಪಥ್ಯ

No comments: