Wednesday, September 8, 2010

ಸಖ್ಯ - ಅಸಹ್ಯ (ಚತುರೋಕ್ತಿ ೧೦)ಅವನೊಡನೆ ಸಖ್ಯ ಪರಮ ಅಸಹ್ಯ

ಕೇಹೂ ಕೂಗಿಗೆ ಬೆಚ್ಚಿ ಅಡಗಿ
ಕೇಕೆ ಹಾಕಿ ಓದುವ ಧರ್ಮ ಗ್ರ೦ಥ

ರ೦ಗಮ೦ಟಪದಲಿ ಸುರ೦ಗ ತೋಡಿ
ಹಾಡುವ ತೋಡಿ ರಾಗ. ನೋಡಿ ನೋಡಿ
ಕಿವಿ ತೆರೆದು ಕೇಳುವರು. ಅ೦ಥ ಮೋಡಿ

ಕಾಕಿ ಹುಶ್ ಎ೦ದರೆ ಓಡುವುದು ಮತ್ತೆ ಬರುವುದು
ಅವನೂ ಅಷ್ಟೆ. ಹಿದಿನಿ೦ದ ತಿವಿದು ಮು೦ದೆ ನಗುವನು
ಅವನ ಚೂರಿಗೆ ನಮ್ಮ ಬ೦ಗಾರದ ಒರೆ
ಕೋಳಿ ನಮ್ಮದು, ಕುಯ್ದದ್ದು ಅವನು, ರೆಕ್ಕೆ ನಮ್ಮಲ್ಲಿ

1 comment:

shivu.k said...

sir,

nijakku chendada kavana. istavaithu.