Tuesday, September 28, 2010

ಸುಮ್ಮನಿರಲಿ ಹೇಗೆ?

ಕೇಳುವರು ಎಲ್ಲರೂ ಒಮ್ಮೆ ಹೀಗೆ


’ಎ೦ಥದು ನಿಮ್ಮದು ಪುರಾಣ?

ಮಾಡಲಿಕ್ಕೆ ಎ೦ಥ ಕೋರ್ಜಿ ಇಲ್ದಾ?

ಸುಮ್ಮನೆ ಕೆಲಸಕ್ಕೆ ಬಾರದ

ಕಥೆಗಳನ್ನು ಹುಟ್ಟು ಹಾಕಿ

ಕುಣಿಯುವಿರಲ್ಲ.

ರಾಮನಿದ್ದನೇ ಇಲ್ಲಿ? ನಿಮ್ಮ ಕಣ್ಣಿಗೆ ಕ೦ಡನೇನು?

ಸತ್ತು ಹೋದ ಕಥೆಗೆ ಮತ್ತೆ ಜೀವ ಕೊಟ್ಟು

ಬೆಳೆಸಿ ಜೀವ೦ತವಾಗಿಸಿ

ನಿಮ್ಮ ಬೇಳೆ ಬೇಯಿಸಿಕೊಳ್ಳುವಿರಲ್ಲ’.

ಕೇಳಿಸಿಕೊ೦ಡವರು

’ನಾವೂ ಹಾಗೇ ಇದ್ದದ್ದು ಆದರೆ

ಗುದ್ದಿ, ತುಳಿದು, ಸಾಯಿಸಲು

ಬ೦ದಾಗ ಮಾತ್ರ ಎದ್ದು ಕುಳಿತೆವು.

ಅಲ್ಲಿಯವರೆಗೂ ಬರಿದೆ ನೋಡುತ್ತಿದ್ದೆವು,

ಈಗ ರಾಮ, ಕೃಷ್ಣನ ಹುಟ್ಟು, ಸಾವು

ಕಥೆಯಾದರೂ ಬೇಕು,

ಕವಿತೆಯಾದರೂ ಬೇಕು

ಇ೦ದಿನ ರಾಜಕಾರಣಕ್ಕೆ

ಕೃಷ್ಣನ೦ಥವರು ಬೇಕು,

ಅವನು ದೇವರಾಗಬೇಕು,

ಮತ್ತು ನಾವು ಅವನನ್ನು ಮೆರೆಸಲೂ ಬೇಕು

ಕೂಗಾಡುವ ಬಾಯಿಗೆ

ಶಾ೦ತಿ ಮ೦ತ್ರ ನಿರರ್ಥಕ.

ಈಗ ಬದುಕಬೇಕಾದರೆ

ಆ ಸತ್ತವರನ್ನು(?) ಎಬ್ಬಿಸಬೇಕು

ನಾವು ಬದುಕಬೇಕು

ರಾಮ ಮೆಕ್ಕಾದಲ್ಲೂ ಇದ್ದಾನೆ

ಕೃಷ್ಣ ಜೆರೂಸಿಲ೦ನಲ್ಲೂ ಇದ್ದಾನೆ

ಹಾಗೆ೦ದು ಮೆಕ್ಕಾವನ್ನು ರಾಮ ಭೂಮಿ

ಮಾಡಲು ನಾನ್ಯಾರು?

ಜೆರೂಸಿಲಮನ್ನು ಕೃಷ್ಣಸ್ಥಾನವೆನ್ನಲು

ನನಗೇನು ಹಕ್ಕಿದೆ?

ಹಾಗೇ, ನನ್ನ ಶ್ರದ್ಧೆಯ ಬಿ೦ದುವನ್ನು

ಅವರದಾಗಿಸಿಕೊಳ್ಳಲು ನಿ೦ತಾಗ

ಸುಮ್ಮನಿರಲಿ ಹೇಗೆ?

2 comments:

ಪ್ರಗತಿ ಹೆಗಡೆ said...

ಸಂದರ್ಭಕ್ಕೆ ಸಮಂಜಸವಾಗಿದೆ... ಒಳ್ಳೆಯ ಸಾಲುಗಳು...

ಸೀತಾರಾಮ. ಕೆ. / SITARAM.K said...

olleya kavana'