Wednesday, September 1, 2010

ನನಗೆ ಒಲಿದ೦ತೆ ನಾನು

ಸಖ


ಹೊಗಳಿಕೆ ಕೇಳಿ

ತೆಗೆದುಕೊಳ್ಳುವುದಲ್ಲವಲ್ಲ

ಗಳಿಸಿಕೊಳ್ಳುವುದು. ಎಲ್ಲರನೂ

ಹೊಗಳಲು ನಾ ಭಟ್ಟನಲ್ಲ

ಉರಿಯುವುದು ಅವರ ಗುಣ

ಸುಮ್ಮನಿರುವುದು ನನ್ನ ಗುಣ

ನನ್ನಿಷ್ಟಕೆ ನಾನೇ

ಜವಾಬ್ದಾರಿ. ನನ್ನನಿಸಿಕೆಗಳಿಗೆ

ನಾನೇ ಹೊಣೆ.

ಯಾರದೇನು ಅಪ್ಪಣೆ

ಎಲ್ಲರನು ಅರಿವ ಪ್ರಯತ್ನದಲಿ

ನೀ ಮೊದಲು ಕ೦ಡೆ

ನಾ ನಿನ್ನ ಮೋಹಿಸಿದೆ

ತಪ್ಪೇನು ಅದರಲಿ?

ಚು೦ಬನವೆನ್ನುವುದು

ವ್ಯಕ್ತಿಗತ, ಸಾರ್ವಜನಿಕವಲ್ಲ

ತಾಯಿ ಗೆದ್ದ ಮಕ್ಕಳಿಗೆ

ಕೊಡುವ ಮುತ್ತು ಮಿಕ್ಕವರಿಗೆ

ಪ್ರೇರಣೆ ’ನಾವೂ ಹಾಗಾದರೆ….’



ಸಖ

ಎಲ್ಲರನೂ ಅಪ್ಪಿಕೊಳ್ಳಲು

ನಾ ವೇಶ್ಯೆಯಲ್ಲ

ನಾನು ಕಲೋಪಾಸಕಿ

ನನಗೆ ಒಲಿದ೦ತೆ ನಾನು

ಯಾರಾದರೆ ನನಗೇನು

ನಾನಿರುವುದೇ ಹೀಗೆ

’ಸು’ಮನ ಕ೦ಡ ಹಾಗೆ

No comments: