Wednesday, September 15, 2010

ಪ್ರೇಮ ಸಂಗೀತ

ನಾನೂ ಒಮ್ಮೊಮ್ಮೆ ಹಾಡುತ್ತೇನೆ


ಒಮ್ಮೆ ಆರೋಹಣ

ಒಮ್ಮೆ ಅವರೋಹಣ

ಯಾರಿಗೂ ಕೇಳದಂತೆ

ನನ್ನೊಳಗೆ ನಾನೇ ಗುನುಗುತ್ತೇನೆ



ನನ್ನ ಸ೦ಗೀತದಿ೦ಪಿಗೆ

ನಾನೇ ಮನಸೋಲುತ್ತೇನೆ

ತಾಳ ತಪ್ಪಿದರೂ ನನಗೆ ನಾನೇ

ರಾಗ ವಿರಾಗವಾದರೂ ನನಗೆ ನಾನೇ

ಗಾಯಕ ಕೇಳುಗ ನಾನೇ ತಾನೆ



ನನ್ನ ಪ್ರೇಮ ರಾಗಕೆ ಈಗ

ಇವಳೊಬ್ಬಳು ಹೊಸ ಜೋಡಿ

ಅವಳ ತಾಳಕ್ಕೆ ತಾಳ ಸೇರಿಸಿ

ಹಾಡಿ ಕಚೇರಿ ನಡೆಸಿ

ಕೇಳುಗನಾಗಿ ನೋಡಿದ್ದೇನೆ

(ಚೆನ್ನಾಗಿದೆ ಗಾಯಕ ಜೋಡಿ)

ಅವಳ ದನಿಗೆ ದನಿಯಾಗಿ

ತಾಳವಾಗಿ , ಸ್ವರವಾಗಿ

ರಾಗವಾಗಿ , ಸ್ಪೂರ್ತಿಯಾಗಿ

ಅವಳಲ್ಲೇ ಸೇರಿಹೊಗಿದ್ದೇನೆ

ಹಾಡಿನೊಳಗಣ ಭಾವದಂತೆ

2 comments:

ಮನಮುಕ್ತಾ said...

ತು೦ಬಾ ಸು೦ದರ ಭಾವದೊಡನೆ ನಿಮ್ಮ ಗಾಯನ,ಗಾಯನದ ಜೋಡಿ.. ಜೋಡಿಗಾಯನವನ್ನು ವರ್ಣಿಸಿದ್ದೀರಿ..

ವೆಂಕಟಕೃಷ್ಣ ಕೆ ಕೆ ಪುತ್ತೂರು said...

"ಹಾಡಿನೊಳಗಿನ ಭಾವದಂತೆ"
ಇಷ್ಟವಾಯ್ತು.