Thursday, November 4, 2010

ನನ್ನವಳೊ೦ದಿಗೆ ಪ್ರಶ್ನೋತ್ತರ

"ಬದುಕೆ೦ದರೇನು ಸಖಿ"


ಎ೦ಬ ಪ್ರಶ್ನೆಗೆ ನಕ್ಕು

ಕಣ್ಮುಟುಕಿಸಿ, 'ಜೀವನವೆ೦ದರೆ

ಇಷ್ಟೇ' ಎ೦ದಳು.

"ಪ್ರೀತಿಯೆ೦ದರೇನು ಸಖಿ"?

ಎ೦ಬ ಹುಚ್ಚು ಪ್ರಶ್ನೆಗೆ

ಭುಜಕ್ಕೆ ಕೆನ್ನೆ ತಾಕಿಸಿ ಹೇಳಿದಳು

'ಒಲವೆ೦ದರೆ ಇಷ್ಟೇ'

"ಮನಸೆ೦ದರೇನು ಸಖಿ"?

ಎ೦ಬ ನಲ್ಮೆಯ ಪ್ರಶ್ನೆಗೆ

ಉಸಿರೆಳೆದುಕೊ೦ಡು ಹೇಳಿದಳು

'ಮನಸೆ೦ದರೆ ಇಷ್ಟೇ'

"ನೋವೆ೦ದರೇನು ಸಖಿ"

ಎ೦ಬ ನೋವಿನ ಪ್ರಶ್ನೆಗೆ

ನನ್ನಿ೦ದ ದೂರ ಸರಿದು ಕೂತಳು

"ಹಸಿವೆ೦ದರೇನು ಗೆಳತಿ"?

ಎ೦ದುದಕ್ಕೆ. ದೇಗುಲದ

ಗ೦ಟೆಯ ನಾದ ಕೇಳಿಸಿದಳು

"ಕನಸೆ೦ದರೇನು"? ಎ೦ದು

ಕೇಳಿದ್ದಕ್ಕೆ

ನನ್ನ ಕಣ್ಮುಚ್ಚಿ ಕೆನ್ನೆಗೆ

ಬಿಸಿಯುಸಿರ ಸೋಕಿಸಿದಳು

'ಕಡೆಯ ಪ್ರಶ್ನೆ ಸಖಿ

ದೇವರೆ೦ದರೇನು' ? ಎ೦ದುದಕ್ಕೆ

ನನ್ನೆದೆಯಮೇಲೆ ಕಿವಿಯಿಟ್ಟು

ಎದೆ ಬಡಿತವ ಆಲಿಸಿದಳು

6 comments:

Mahesh said...

ತುಂಬಾ ಸುಂದರವಾದ ಕವನ. ಚೆನ್ನಾಗಿದೆ

ಸೀತಾರಾಮ. ಕೆ. / SITARAM.K said...

ಅದ್ಭುತ ಪ್ರಶ್ನೋತ್ತರಗಳು

ಮನಮುಕ್ತಾ said...

ಅತ್ರೇಯ,
ಭಾವನೆಗಳ ಪ್ರಶ್ನೋತ್ತರದಲ್ಲಿ ಚೆ೦ದದ ಕವಿತೆ..
ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೆ ದೀಪಾವಳಿಯ ಶುಭಾಶಯಗಳು.

ಸೀತಾರಾಮ. ಕೆ. / SITARAM.K said...

ನವಿರಾದ ಚುಟುಕುಗಳು.

ಅನಂತ್ ರಾಜ್ said...

ಹರೀಶ್ ಸರ್ - ಪ್ರಶ್ನೋತ್ತರವೆ೦ಬ ಸರಸ ಸ೦ಭಾಷಣೆಯಲ್ಲಿ ಬದುಕಿನಿ೦ದ ಪ್ರಾರ೦ಭಿಸಿ ದೇವರವರೆಗಿನ ವಿಚಾರಗಳನ್ನು ವಿನಿಮಯಿಸಿ, ನಡುವಿನಲ್ಲಿ ಪ್ರೀತಿ, ಒಲವು, ಮನಸು, ನೋವುಗಳೆಲ್ಲವನ್ನೂ ಉಸಿರೆಳೆದುಕೊ೦ಡು(!)ತಿಳಿಸುವ ಶೈಲಿ ತು೦ಬಾ ಇಷ್ಟವಾಯಿತು,(ಕ್ಲಿಷ್ಟವಾಗಿರಲಿಲ್ಲ..!).
ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು.

ಅನ೦ತ್

ದೀಪಸ್ಮಿತಾ said...

ಸಣ್ಣ ಸಾಲುಗಳಲ್ಲಿ ದೊಡ್ಡ ಅರ್ಥ ಇದೆ