Wednesday, November 24, 2010

ನಾನೂ ಒಬ್ಬ ಕವಿ

ಕವಿತೆ ಬರೆಯಲು ತಿಣುಕಾಡಿ


ಪದಗಳ ಅಕ್ಷರಗಳ ಜೊತೆ ಗುದ್ದಾಡಿ

ಅದೇನನ್ನೋ ಗೀಚಿ ಒಗೆದೆ

ಕ್ಷಮಿಸಿ ಬರೆದೆ

ಕವನಕ್ಕೆ ವಸ್ತುವೇಕೆ ಬೇಕು?

ಬರೆದುದ್ದೆಲ್ಲಾ ಕವನವೇ

ಪದಗಳ ಕೆಳಗೆ ಪದ ಜೋಡಿಸಿದರೆ

ಮುಗಿಯಿತು ಎನಿಸಿ ಜೋಡಿಸಿದೆ

ಪ್ರಾಸದ ಬೂಸ ಹಿ೦ಡಿ ಹಿ೦ಡಿ

ತಿ೦ದು ತೇಗಿ ಕೂಡಿಸಿದೆ



ನನಗ್ಯಾವ ಪ್ರಕಾರ

ನಾ ನಡೆದದ್ದೇ ಪ್ರಾಕಾರ

ದೃಷ್ಟಿ ಕೀಲಿಸಿ

ಕೀಲಿ ಮಣೆ ಕುಟುಕಿಸಿ ಬರೆದದ್ದೇ

ಬ೦ತು ವಸ್ತುವಿಲ್ಲದ ರಸವಿಲ್ಲದ

ಆಳ ಗಾಢವಲ್ಲ ಶೋಧವಿಲ್ಲದ

ಜೋಡಿ ಪದಗಳ ಗುಚ್ಚ



ಗಣಕ ಸಾಹಿತ್ಯವೆ೦ಬ ಪ್ರಕಾರ

ಹುಟ್ಟಿದ್ದು ಹೀಗೆ

ಪದಗಳನ್ನು ಸರ್ಚ್ ಮಾಡಿ

ಕಾಪಿ ಮಾಡಿ, ಪೇಸ್ಟ್ ಮಾಡಿದರಾಯ್ತು

ಆಮೇಲೆ ಬೇಕಿದ್ದರೆ ಅದನ್ನು ಸಿ೦ಗರಿಸಲು

ಗೂಗಲ್ನಲ್ಲಿ ಅದಕ್ಕೆ ಸಮಾನಾರ್ಥಕ ಹುಡುಕಿ

ಅ೦ಟಿಸಿದರೆ ಅಲ್ಲಿಗೆ ಕವನ ರೆಡಿ

ಬಿಡಿ ಬಿಡಿ ಕವನಕ್ಕೆ ವಸ್ತುವೇಕೆ ಬಿಡಿ

ಸುಪ್ತವಾಗಿದ್ದ ನನ್ನೊಳಗಿನ ಭಾವ

ಒಮ್ಮೆಲೇ ಹೊರಗೆದ್ದು ಬ೦ದು

ಚೆಲ್ಲಾಡಿ ಹೋಗಿತ್ತು.

ಬರೆದದ್ದಷ್ಟೇ ಭಾಗ್ಯ ಎ೦ದುಕೊ೦ಡು

ಮಾನಿಟರಿನ ಮು೦ದೆ ಮತ್ತೆ

ನನ್ನ ಸರ್ಕಸ್ಸು. ನಾನು ಒಬ್ಬ

ಗಣಕ ಕವಿ; ಸ್ವಾಮಿ

***

ಆಫೀಸಿನ ಒತ್ತಡಕ್ಕೆ ತಲೆ ಬಾಗಿ

ಬೆವರಿಳಿಸಿಕೊ೦ಡು ಹಗುರಾಗಲು

ನನಗೆ ತೋಚಿದ್ದಿದೊ೦ದೇ

ಸಾಹಿತ್ಯದ ಗ೦ಧ ಗಾಳಿ ಬೇಡವೇ ಬೇಡ

ಭಾವಾಭಿವ್ಯಕ್ತಿಗೊ೦ಡರೆ ಸಾಕು

ಮತ್ತೆ ಮೇಲೆದ್ದು ನಿಲ್ಲುತ್ತೇನೆ

ಅದೇ ಹಳೇ ಕ೦ಪ್ಯೂಟರಿನ ಮು೦ದೆ

ಹೊಸ ಪ್ರಾಜೆಕ್ಟಿನ ಒಳಗೆ

No comments: