Wednesday, November 10, 2010

ನಿನ್ನೊ೦ದಿಗೆ ನಾನು

ಸಾಲು ದೀಪದ ಕನಸಲ್ಲಿ

ಒ೦ದಷ್ಟು ಹೊತ್ತು ಆಡೋಣ
ತೆಳ್ಳಗಿನ ದೀಪದ ಬೆಳಕಲ್ಲಿ
ನಾನು ನೀನು ಮಾತನಾಡಬೇಕಿದೆ
ಕೆ೦ಪು ಹಳದಿ ಬಣ್ಣಗಳಲ್ಲಿ ಮೂಡುವ ನಿನ್ನ
ನಾಚಿಕೆಯನ್ನೊಮ್ಮೆ ನೋಡಲೇಬೇಕಿದೆ
ಉರಿವ ಹತ್ತಿಯ ಬತ್ತಿಯ ಜೊತೆಗೆ
ಮಡುಗಟ್ಟಿ ನಿ೦ತ ತೈಲದ ದೈವಿಕ
ವಾಸನೆಗೆ ನಾನು ನೀನು ಜೊತೆಯಾಗಬೇಕಿದೆ
ಕೈ ಹಿಡಿಯದೆ, ಮೈ ಸೋಕದೆ
ಕುಳಿತಷ್ಟೂ ಘಳಿಗೆಗಳು ನನ್ನದು ಮತ್ತು ನಿನ್ನದು
ನಗುವ ಕಣ್ಣುಗಳ ಜೊತೆಗೆ
ಹನಿಗೂಡಿದ ಆಕಾಶದೆಡೆಗೆ ಮುಖ ಮಾಡಿ
ಒ೦ದಷ್ಟು ಹೊತ್ತು ನಿಲ್ಲೋಣ
ಹೊತ್ತು ಸರಿದು ಹೋಗುತ್ತಿದೆ ಗೆಳತಿ
ಮನದಾಳದ ಮಾತುಗಳು ಕಣ್ಣಿನಲಿ
ಕ೦ಡರೂ ನಾನು ನಿನ್ನ ದನಿ ಕೇಳಬೇಕಿದೆ
ತುಟಿಯ೦ಚಿಗೆ ಕಾಣುವ ನಿನ್ನ
ಮೋಹಕ ಗುಳಿಯನ್ನು ನೋಡಬೇಕಿದೆ
ಬಾ ಗೆಳತಿ ದೀಪಗಳ ಬೆಳಕಿನಲ್ಲಿ
ಮನ ಬೆಳಕಾಗಿಸಿಕೊಳ್ಳೋಣ

4 comments:

AntharangadaMaathugalu said...

ಹರೀ...
ಚೆನ್ನಾಗಿದೆ... ಸಾಲು ದೀಪಗಳ ತೆಳ್ಳಗಿನ ಬೆಳಕಲ್ಲಿ.. ಗೆಳತಿಯೊಂದಿಗಿನ ಮಾತುಕತೆಯಾಡುವ ಕಲ್ಪನೆಯೇ ಮಧುರವಾಗಿದೆ.... :-)

ಶ್ಯಾಮಲ

ಮನಮುಕ್ತಾ said...

ಸು೦ದರ ಸಾಲುಗಳು...

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

tumbane romantic salugalu...channagidae:)

Venkatakrishna.K.K. said...

ಕುಳಿತಷ್ಟೂ ಘಳಿಗೆಗಳು ನನ್ನದು ಮತ್ತು ನಿನ್ನದು
ನಗುವ ಕಣ್ಣುಗಳ ಜೊತೆಗೆ,
ಕೈ ಹಿಡಿಯದೆ, ಮೈ ಸೋಕದೆ....

ಸುಂದರ!!