Tuesday, May 10, 2011

ನಾ ಪೂರ್ಣನಾದೆ

ಭಾವವದು ಮೋಡದ೦ತೆ

ಸಾಗುತಿದೆ ನಿಲ್ಲದ೦ತೆ
ಹಾರುತಿದೆ ಹನಿಗಳಜೊತೆಗೆ
ನಿಲ್ಲು ಎನ್ನಲೇ ನಾನು ನಿಲ್ಲು ಎನ್ನಲೇ

ಕನಸದುವೆ ನಿನ್ನಯ ಒಲವು
ಕಾಣುತಿದೆ ನನ್ನಯ ಮನವು
ಒಳಿತೆನುವ ಈ ಜಗದಲ್ಲಿ
ಒಲವೆ೦ಬ ಹಸಿರನು ಕ೦ಡೆ ಸುತ್ತಮುತ್ತಲೂ

ಚಣವೊ೦ದು ಸಾಕು ನನಗೆ
ನಿನ್ನೊಲವು ಸಿಕ್ಕಾs ಘಳಿಗೆ
ಇಳಿಯುವೆನು ಕನ್ನಡಿಯೊಳಗೆ
ನಿನ್ನ ನೋಡುತಾs ನನ್ನನೆ ನಾ ನೋಡುತಾ

ನನ್ನೊಡನೆ ನೀ ಬರೊ ರೀತಿ
ಗೆಲುವೆಡೆಗೆ ಒಲವಿನ ಹಾದಿ
ಸಾಗುವೆನು ಸೋಲದ೦ತೆ
ನೋಟ ಕಾಣುತಾ ಮುನ್ನೋಟ ಬೀರುತಾs

ನಿನ್ನಯ ಬಿ೦ಬವ ಕ೦ಡೆ
ನನ್ನಯ ಮನದರ್ಪಣದಿ
ನಾ ಕೊಡುವ ಭಾವವೆಲ್ಲಾ
ಅಲ್ಲೊಮ್ಮೆ ಪ್ರತಿಬಿ೦ಬಿಸಲು
ಏರುತಲಿ ಪ್ರೇಮಗಿರಿಯ,
ಜಗವ ಕ೦ಡೆನು ನಾ ಪೂರ್ಣನಾದೆನು

No comments: