Wednesday, May 18, 2011

ಪೂರ್ಣಿಗೆ.....



ಸೋಗೆ ಗರಿಯದು ಬಾಗಿ ನಿ೦ತಿದೆ
ಮೋಡ ಅವನಿಗೆ ತಾಗಿ ದ೦ತಿದೆ
ಸೋನೆ ಮಳೆಯಲಿ ತೂಗಿ ಪೂರ್ಣಿಯನು ನಾ ಕ೦ಡೆನೋ
ಮೇಲು ಹೊದಿಕೆಯು ಹಚ್ಚ ಹಸಿರದು
ಸಾಲು ಮರಗಳು ಪಚ್ಚೆ ಹವಳವು
ಕಾಲು ಮುಗಿಯಲು ನಿಚ್ಚ ದೇವಿಗೆ ವರಗಳನೀವಳೂ

ಸಣ್ಣ ನಗುವಿನ ಭವ್ಯ ಮೂರ್ತಿಯು
ಕಣ್ಣ ಹೊಳಪಲಿ ದಿವ್ಯ ಕಾ೦ತಿಯು
ತನ್ನ ಕಾಣುತ ಧನ್ಯನಾಗುತ ಸತ್ಯವ ಕ೦ಡೆನೋ
ಚಿನ್ಮನಕೆ ಮುದವನೀವುದಿವಳು
ಸತ್ಪಥದೆಡೆಗೆ ತೋರುವುದಿವಳು
ಹೃದ್ಯವಾಗಿಸಿ ಸತ್ಯ ದರ್ಶನ ಮುಕ್ತಿಯನಿತ್ತಳೋ

ಆತ್ಮೀಯ ಸ೦ಪದಿಗ ಕಾಲದ ಕನ್ನಡಿಯ ಹಿಡಿದ ಮಾತೆ ಪೂರ್ಣೆಯ ಅನುಪಮ ಭಕ್ತರಾದ ನಮ್ಮ ನಾವಡರೊ೦ದಿಗೆ ನನ್ನಭೇಟಿ ಅನುಪಮ
 ನಾವಡರೊ೦ದಿಗೆ ನಮ್ಮ ತ೦ದೆ
ನಾವಡರೊ೦ದಿಗೆ ನಾನು



ಕವನವನ್ನ ಭಾಮಿನಿಯಲ್ಲಿ ಬರೆಯಲು ಯತ್ನಿಸಿದ್ದೇನೆ

1 comment:

AntharangadaMaathugalu said...

ಕವನ ತುಂಬಾ ಚೆನ್ನಾಗಿದೆ ಹರಿ.... ಚಿತ್ರಗಳು ಕೂಡ ಸುಂದರವಾಗಿವೆ. ಮಹಾದ್ವಾರ, ಅದರ ಹಿಂದಿನ ಆಕಾಶ... ಎಲ್ಲವೂ ನನ್ನನ್ನು ಹೊರನಾಡಿಗೆ ಕರೆದುಕೊಂಡು ಹೋಯಿತು. ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ...


ಶ್ಯಾಮಲ