Wednesday, June 29, 2011

ಪಾಠ

ಉಸಿರು ಹಿಡಿದು ಕೂತ ಹೊತ್ತು


ಕೇಳದಾಯ್ತು ಮನದ ಮಾತು

ಏನಿದೇನಿದೆನುತ ಕ೦ಡೆ ಸುತ್ತಮುತ್ತಲೂ

ಕಾಣದ೦ತೆ ಕಣ್ಣು ಮುಚ್ಚಿ

ಆಟ ಹೂಡಿ ಓಡಿ ಹೋದ

ಅವಳಿಗಾಗಿ ಮಿಡಿದ ಮನವು ಕಪ್ಪು ಕತ್ತಲುಮೊದಲ ಮಳೆಯ ಮಣ್ಣ ಕ೦ಪು

ಮಗುವ ತೊದಲ ಮಾತಿನಿ೦ಪು

ಕ೦ಡು ಕುಣಿವ ನನ್ನ ಮನಕೆ ಅವಳೆ ಸತ್ಯಳೋ

ಮೌನಿ ಮುಖದೆ ನಗುವ ತ೦ದ

ನೊ೦ದ ಮನಕೆ ಹಸಿರ ತ೦ದ

ಮಾಟಗಾತಿ ಒಲವ ಮೂರ್ತಿ ಅವಳೆ ನಿತ್ಯಳೋದಾರಿಗು೦ಟ ನಡೆಯುವಾಗ

ಬಾರಿ ಬಾರಿಗೊ೦ದು ರಾಗ

ಹಾಡಿ ನಲಿಸಿ ಹೊಸತು ಲೋಕ ತೋರಲೇತಕೆ

ಬರುವೆನೆನುತ ತಿರುಗಿ ನೋಡಿ

ಮರೆವೆ ಅದುವೆ ಜಗದ ಮೋಡಿ

ಎನುತ ನನ್ನ ಮರೆತು ನಡೆದು ಹೋಗಲೇತಕೆಲೋಕದೊಳಗೆ ಹಣವದೊ೦ದು

ಮಾಯೆಯೆ೦ದು ಬಗೆದ ನನಗೆ

ಕಾಣದೊ೦ದು ಲೋಕದಾ ನಡೆಯ ತಿಳಿಸಿದೆ ನೀ

ನದರ ಹಿ೦ದೆ ನಡೆದ ದಿನವೆ

ಮೂರ್ಖನಾದೆ ನಾನು ಗೆಳತಿ

ಒಲವ ಜಗವು ಎನುವ ನನಗೆ ಪಾಠ ಕಲಿಸಿದೆ

No comments: