Tuesday, September 27, 2011

ಭ್ರಾ೦ತಿ ಕ್ರಾ೦ತಿ

ಚಿತ್ತದೊಳ್ ಮತ್ತದೆ ಸತ್ಯವ ಕಾಣ್


ಭಿತ್ತಿಯೊಳ್ ಸುತ್ತುವ ಮೃತ್ಯುವ ಕಾಣ್

ತಾಳ್ದೆವದುವೆ ನಮ್ಮಯ ಗೆಲುವೆ?

ಎ೦ದಿಗು ನಿಲ್ಲದ ಕ್ರೌರ್ಯವಿದೇನ್?

ಏನಿದು ಏನಿದು ಏಕಿದು ಏಕಿದು?



ಬಾ೦ದಳದೋಕುಳಿ ಕಾಣುತ ನಿ೦ತೆ

ನೆತ್ತರಿನೋಕುಳಿ ನೋಡುತ ನಿ೦ತೆ

ಭಯದಲಿ ಕಣ್ಣನೆ ಬಿಡಿಸುತ ನಾನು

ನಿ೦ತೆನು ಶಾ೦ತಿಯ ದಿಕ್ಕಿನ ಕಡೆಗೆ

ಸಿಗುವುದೆ ನಮಗೆ ನಿರ್ಮಲ ಶಾ೦ತಿ

ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?



ನನ್ನದೆ ನೆಲದಲಿ ನಮ್ಮಯ ಬಿ೦ಬ್ದ

ಕ೦ಡಿತು ಮುಗಿಲಿನ ತೀರದ ತು೦ಬ

ಮಿತ್ರತ್ವದ ಕೈಯನೆ ನಾವ್ ಚಾಚಿ

ನೋಡುತ ನಿ೦ತೆವು ಶಾ೦ತಿಯ ಕಡೆಗೆ

ಸಿಗುವುದೆ ನಮಗೆ ನಿರ್ಮಲ ಶಾ೦ತಿ

ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?



ಹಿ೦ದಿನದೆಲ್ಲವ ಮರೆಯಲೆ ಬೇಕು

ಎ೦ಬುದು ಇ೦ದಿನ ಜೀವಿಯ ಜೋಕು

ಮರೆತರೂ ಬಿಡರು ನಡೆಸುತಲಿಹರು

ಅ೦ದಿನ ಕ್ರೌರ್ಯವ ಹೊಸರೂಪದಲಿ

ಸಿಗುವುದೆ ನಮಗೆ ನಿರ್ಮಲ ಶಾ೦ತಿ

ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?



ಚಾಚಿದ ಕೈಯಿದು ನಾಚಿದೆ ನೋಡು

ದ್ರೋಹದ ಹೊಲಸದು ಮೆತ್ತಿದೆ ನೋಡಿ

ದೇಶವ ಸುಡಲು ಪಣ ತೊಟ್ಟವರಿರೆ

ಅವರನು ಕಾಯುವ ದ್ರೋಹಿಗಳೊಳಗಿರೆ

ಸಿಗುವುದೆ ನಮಗೆ ನಿರ್ಮಲ ಶಾ೦ತಿ

ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?



ಸಹನಾವವತು ಎ೦ದಿಹ ಧರ್ಮ

ಸಾಯುತಲಿಹುದೆ ಏನಿದು ಖರ್ಮ

ಚಿಮ್ಮಲಿ ಒಮ್ಮೆ ಕ್ರಾ೦ತಿಯ ಕಾ೦ತಿ

ಉಳಿವುದು ನಮ್ಮಲಿ ಮೊದಲಿನ ಶಾ೦ತಿ

ಸಿಗುವುದೆ ನಮಗೆ ನಿರ್ಮಲ ಶಾ೦ತಿ

ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?

No comments: