Thursday, November 3, 2011

ನಿರೀಕ್ಷೆ

ನಡೆದಷ್ಟೂ ದೂರ ನಿನ್ನೊ೦ದಿಗೆ


ಮಳೆಯಲ್ಲಿ ನಾ ನಡೆಯ ಬೇಕಿದೆ

ಸಣ್ಣಗೆ ಜಿನುಗುವ ಮಳೆಯೊಳಗೆ

ನಾನಿನ್ನ ಬೆಚ್ಚನೆ ಕೈ ಹಿಡಿಯಬೇಕಿದೆ

’ನಾನಿರುವೆ’ನೆ೦ಬ ನ೦ಬಿಕೆಯ

ಕೈಯೊಳಗೆ ಹಿತವಾದ ರಕ್ಷಣೆಯಿದೆ ಮತ್ತು

ಕಣ್ಣೊಳಗೆ ಪ್ರೀತಿ ಸಾಗರವಿದೆ

ಗೆಳೆಯ

ನನ್ನೊಳಗಿನ ಪ್ರೀತಿಗೆ ನಿನ್ನದೇ

ಬಿ೦ಬ ನಾ ನಿನ್ನ ಬಿ೦ಬಿಯಷ್ಟೇ

ಹನಿಯ ಮೇಲಿನ ಹನಿ ಹನಿಯೇ ತಾನೆ

ನಾನಿನ್ನೊಳಿಲ್ಲವಾಗುವುದೇ ನಿಶಾನೆ.

ಸಧ್ಯಾಸಾಧ್ಯತೆಗಳ ನಡುವೆ ನಾನು ನೀನು ಮತ್ತು ಮಳೆ

ಬ೦ದುಬಿಡಲಿ ಬೇಗ ಆ ದಿನ

ತುದಿಬೆರಳ್ಹಿಡಿದು ನಡೆವ ಆ ಸುದಿನ

ಆ ದಿನ ಮಾತೆಲ್ಲಾ ಮೌನ

No comments: