Wednesday, December 7, 2011

ಅಣೆಕಟ್ಟು

ಹೋಗುವ ದಾರಿಯುದ್ದಕ್ಕೂ
ಅದೇ ರಾಶಿ ನೆಲ
ಅದೇ ಸಾಲು ಮರ
ನಡೆದಾಡುವ ಕಾಲ ಕೆಳಗೆ
ನುಸುಳಿ ಹೋದ ಗಾಳಿಗೂ
ನಾನು ಬೇಡವಾಗಿಬಿಟ್ಟೆ
***************
ಒ೦ದಷ್ಟು ದೂರ ನಡೆದಾದ ಮೇಲೆ
ಹೊಳೆದದ್ದಿಷ್ಟು
ನನಗೆ ನಾನೇ ಇರುವುದಾದರೆ
ಬೇರೆಯವನೇಕೆ ಜೊತೆಗೆ
ಜೊತೆಗೊಬ್ಬನಿರುವುದಾದರೆ
ನಾನೊಬ್ಬನೇಕೆ?
ಯೋಚಿಸಿದಷ್ಟೂ ಗೋಜಲಾಗುವ
ಗೋಜಲಾದಷ್ಟೂ ಗೊ೦ದಲವಾಗುವ
ಗೊ೦ದಲದೊಳಗೆ ನಾನು ದ್ವ೦ದ್ವವಾಗುವಿಕೆ
ನನ್ನೊಳಗೆ ಬುದ್ಧಿ ಬಲಿಸಿತೇ? ಬೆಳೆಸಿತೇ?
***************
ಕಾಡುವ ಭಾವಗಳೊಳಗೆ
ನಿ೦ತಾಗ ಕ೦ಡದ್ದು
ಅವಳೇಕೆ ಹಸಿರು
ನನಗೇಕೆ ಹಸಿರಮೋಹ
ಹಸಿರಿಗೆ ಬಣ್ಣವೇ ಬೇಡ
ನನಗೋ ಅದೊ೦ದು ಮೋಡ
ಮಳೆಯಾಗಿ ನನ್ನ ಮೇಲೊ೦ದಿಷ್ಟು ಸುರಿದರೆ
ಒ೦ದಷ್ಟು ಬಿತ್ತಿ ಬೆಳೆವೆನೆ೦ಬ ಅಹ೦
ಸಾಕಾಯ್ತಲ್ಲವೇ
ಸಾಕಿನ್ನು ಎದ್ದು ನಡೆ ಹೊರಡು
ತೀರಕೆ ಎ೦ದವನಿಗೆ ಮತ್ತೆ ಅಚ್ಚರಿ
ನನ್ನದೇ ನದಿಗೆ ನಾನೇ ಏಕೆ ಅಣೆಕಟ್ಟು
ನಗುವ ಸರದು ನಿಮ್ಮದು

No comments: