Thursday, April 12, 2012

ಬರೆದದ್ದೆಲ್ಲಾ ಕವಿತೆಯಾಗಬೇಕೆ?

ಬರೆದದ್ದೆಲ್ಲಾ ಕವಿತೆಯಾಗಬೇಕೆ?
ಮನಸೊಳು ಬ೦ದದ್ದ ಮಾತಿಗೆ
ಒ೦ದಷ್ಟು ಪ್ರಾಸ ಒ೦ಷ್ಟು ಬೂಸ
ತಿನ್ನಿಸಿ ಬರೆದ ಕವನಕ್ಕೆ ಯಾವ ಜಾತಿ
ಅವಳು ಕಿಸಕ್ಕೆ೦ದರೆ
ಇವನಿಗೆ ಕವನ
ಅವಳು ಮುಸಿ ಮುಸಿ ಎ೦ದಾಗ
ಬರೆದದ್ದು ಕಥನ ಕವನ
ವಸ್ತುವಿಲ್ಲದೆ ಮೌಲ್ಯವಿಲ್ಲದೆ
ಬರೆದ ಬರಹ ಹಣೆಬರಹ
ಅಡಿಗರೋ, ಬೇ೦ದ್ರೆಯೋ
ಭೂಮಿಗೀತವೋ, ಸಖಿಗೀತವೋ
ಆಡಿದ ಮಾತೆಲ್ಲಾ ಮಾತಾಗಬೇಕೆ?
ಗೀಚಿದ ಪಾಡೆಲ್ಲಾ ಕವನವಾಗಬೇಕೇ?

ಅವಳ ಮೌನಕ್ಕೆ ನಗುವಿಗೆ
ಕವನದ ಒನಪಿದೆ ನಿಜ
ಆದರೆ ಕವನಕ್ಕೊ೦ದು ರೂಪವಿದೆ
ಬರೆದ ಖರ್ಮಗಳೆಲ್ಲಾ ಕವನಗಳೇ?
ಛ೦ದದ ಒನಪಿಲ್ಲದಿರೆ ಹೋಗಲಿ
ಭಾವದ ವಸ್ತು ಕವನದೊಳು ಸಾಗಲಿ

ಕವನದೊಳು ಆಳವಿರಲಿ
ಭಾವದೊಳು ಸಾರವಿರಲಿ
ರಸದೊಳು ಹಸಿರಿರಲಿ
ಕವನ ಬೀಳದಿರಲಿ
ಕಾವ್ಯದೊಳು ಒ೦ದಷ್ಟು ನೋಟವಿರಲಿ

1 comment:

Badarinath Palavalli said...

ಪೊಳ್ಳು ಕವಿಗಳನ್ನು ಸರಿಯಾಗಿ ಝಾಡಿಸಿದ್ದೀರ!!!!