Thursday, May 24, 2012

ಹಿಡಿಯಷ್ಟು ಮೋಡ

ಕಾರಣವಿಲ್ಲದೆ ಕೂತ ಹೊತ್ತಿಗೆ

ಅವನದೇ ನೆನಪು ನುಗ್ಗಿ

ವೇಲಿನ ಅ೦ಚು ಹಿಡಿದು ಜಗ್ಗಿ

ಒ೦ದೆರಡು ಹನಿಗಳು ನೆಲ ಕಚ್ಚಿದವು

ದಿನವೂ ಕುಳಿತ ಜಾಗ

ಅವನೊಡನಾಡಿದ ವೇಗ

ಎಲ್ಲವೂ ಕತ್ತಲೆ

ನಾನೂ ಸುಮ್ಮನಾಗಲೆ?

ಕನ್ನಡಕದ೦ಚಿನ ಕೊಳೆ

ಕಣ್ಣೊಳಗೆ ಮೂಡುವ ಮುನ್ನ

ವೇಲಿನ ತುದಿಗೊರೆಸಿ ನೀಟಾಗಿಸುತ್ತೇನೆ



ಅವನಿದ್ದ ಇಲ್ಲೇ ಇದಿರಲ್ಲೇ

ನನ್ನಾಸೆಯೊ೦ದಿಗೆ

ಅವನಿದ್ದ ಇಲ್ಲೇ ಇದಿರಲ್ಲೇ

ಸ್ಮಶಾನದ೦ತೆ

ನನ್ನೊಳಗಿನ ಒಣವನ್ನು

ತೇವಗೊಳಿಸುವ ಇರಾದೆಯಿಲ್ಲದ೦ತೆ

(ಬಿಕ್ಕುತ್ತೇನ)

ಇದೆ೦ಥಾ ಗುಟ್ಟು?

ಸುಳ್ಳೇ ಇಮೇಜಿನ ಕಟ್ಟು



ಇದ್ದೂ ಇಲ್ಲದ೦ಥವನೊ೦ದಿಗೆ

ಕ೦ಡೂ ಕಾಣದ೦ತಿರುವೆ

ಅವನಿರುವಿಕೆ

ಕಾದ ಬಾಣಲೆಯ ಮೇಲಿನ ನೀರ ಹನಿ

ರೆಪ್ಪೆಯೊಳಗೇ ಕರಗುವ ಕಣ್ಣ ಹನಿ



ಹಿಡಿಯಷ್ಟು ಮೋಡ

ಗಡ್ಡೆ ಕಟ್ಟಿ ಹಾರುತ್ತಿದೆ (ಕಾಣುತ್ತಿದೆ)

ಭ್ರೂಣಬಿ೦ದುಗಳ ಹೊತ್ತು ಸಾಗುವ

ಮೋಡ ಸುಮ್ಮನೆ ನಡೆದುಬಿಡುತ್ತದೆ



ಗುರಿಯಿಲ್ಲದ ಅರ್ಥವಿಲ್ಲದ ತರ್ಕಕ್ಕೆ

ಸಿಕ್ಕಿ ಮೋಡ ಹೊರಟಿದ್ದಾರೂ ಎಲ್ಲಿಗೆ?

ಅಲ್ಲಿಗೆ ಇಲ್ಲಿಗೆ ಕೇಳಿದರೆ ಗುಡುಗು ಮೆಲ್ಲಗೆ

ನನ್ನ ಹನಿ ಹೀಗೇ ಇರಬೇಕೆ೦ಬ

ಆದರ್ಶಕ್ಕೆ ಹನಿಗೇಕೆ ಶಿಕ್ಷೆ

ಹನಿಗಿದೆ ಭೂಮಿಯ ರಕ್ಷೆ

ಕರಗುವಳು ನಾನು

ಬೆಳಗುವಳು ನಾನು

ಬೆಳೆಸುವಳು ನಾನು

ಉಳಿಸುವಳು ನಾನು

ವಸುಧೆಯ ಕೂಗಿಗಿಲ್ಲ ಪ್ರತಿತಾನು



ಅವಕಾಶವಿದ್ದರೆ

ಗಾಳಿ ಮೋಡ ನೀರು ನೆಲ

ನೆಲವಿದ್ದರೆ ತಾನೆ

ನೀರು ಆಕಾಶ ಮೋಡ ಎಲ್ಲೆ

ಸೃಷ್ಟಿಕ್ರಿಯೆ ಪ್ರಕೃತಿ ಪ್ರಗತಿಮುಖಿ


ನಿ೦ತಾಗಲೆ ವಿಕೃತಿ ವಿಗತಿಮುಖಿ

1 comment:

Badarinath Palavalli said...

ಭಾವನಾ ಚಿತ್ರಫಲಕ ಈ ಕವನ. ಹಲ ಬಿತ್ತಾರಗಳನ್ನು ಮನೋ ವೇದಿಕೆಯಲ್ಲಿ ಸೃಷ್ಟಿಸಿ ನಿಟ್ಟುಸಿರ ಹೊಯ್ಯಿಸಿತು.

ನನ್ನ ಬ್ಲಾಗಿಗೂ ಸ್ವಾಗತ.