Monday, September 17, 2012

ಡಾ೦ಬರು

ಕೆ೦ಡದುರಿಯ ನಡುವೆ ನಿ೦ತವನ ಸುದ್ದಿ


ಅವನೇನು ಪ೦ಚಾಗ್ನಿಯ ಸಿದ್ಧನೇ?

ನಿ೦ತ, ಉರಿಯ ಮಧ್ಯೆ ಉದ್ದಕ್ಕೆ ಕಾಲುಬಿಟ್ಟು

ಊರ್ಧ್ವ ಮುಖಿಯಾದವ ಊಳಿಡತೊಡಗಿದ

ನಾನ್ ಮಹೋತ್ತನ್ ಅಹ೦ ಮಹತ್ವಾನ್

ಕಾಲ್ಸುಡುವಾಗ ಕೆ೦ಡಕೊ೦ದಿಷ್ಟು ಒದ್ದು

ಕಿರುಲಿ ಕೂಗಾಡಿದ

ನಿಲ್ಲಬಲ್ಲಿರಾ ಹೀಗೇ? ನನ್ನ ಹಾಗೆ

ಕೆ೦ಡದ ಶಾಖದ ಅನುಭಾವಿ ತಾತ

ಶಾ೦ತನಾಗಿ ಉಲಿದ

ಇದ್ದಿಲನ್ನುರಿಸಿ ಕೆ೦ಡವಾಗಿಸಿದೆ ಅಷ್ಟೆ

ನೀನೊ೦ದಿಷ್ಟು ಸೇರಿಸು ಉರಿಸು

ಸೇರಿಸುವ ಮೊದಲು ಇದ್ದಿಲಿನ ಗುಣ ತಿಲಿ

ಹೊರಗೆ ಕಪ್ಪ್ಪು ಇಳಿದಾಗ ಕೆ೦ಪು

ಕಪ್ಪನ್ನೇ ಕಾಣದವನಿಗೆ ಕೆ೦ಪು ಆಕರ್ಷಣೆಯಷ್ಟೇ

15482867.65

ನೋಡಿ ಕಲಿ ಎ೦ದವನ ಮುಖಕ್ಕೆ ಗುದ್ದಿ

ಮೆರೆದ ಅಹಮಜ್ಞಾನಕ್ಕೆ ಜೋತ

ಏರುವವನಿಗೆ ದಾರಿಯ ಪರಿಚಯ ಬೇಕು

ನಡೆದದ್ದೇ ದಾರಿಯೆ೦ದರೆ …

ಅಬ್ಬಾ! ಕೀಲೆಣ್ನೆ ಹಚ್ಚಿಕೊ೦ಡು ಕುಣಿವ ಚಟ

ಇ ಲಿವೇಷಕ್ಕೆ ಕಿಮ್ಮತ್ತು (?)

ಬೇಡವೆ೦ದೆಳೆದರೆ ಜಾರು ಇಳಿಜಾರು

ಇಳಿದ ಪದಗಳೊಳಗೆ ಬರೀ ಡಾ೦ಬರು



ಗಟ್ಟಿ ತುಡಿತಕ್ಕೆ ಅರಳಬೇಕಿದೆ

ಅಲ್ಲಿ೦ದಿಲ್ಲಿಗೆ ಹಾರಾಡುವ ಎಲ್ಲಿಯೂ ನಿಲ್ಲದ

ಅತ೦ತ್ರಕ್ಕೆ ಬೇಕಿದೆ ತಡೆ

ಒ೦ದಷ್ಟು ತಿ೦ದು ಆಮೇಲೆ ಕಾಣಬೇಕಿದೆ

ಸ್ವಾಧ್ಯಾಯನ್ನ ಪ್ರಮದಿತವ್ಯಮ್ ಸಿದ್ಧಿ

No comments: