Monday, October 15, 2012

ನೀನೆನ್ನ ಮನೆಯವಳು


ನೀನೆನ್ನ ಮನೆಯವಳು
***********
ನೀನೆನ್ನ ಮನೆಯವಳು
ನೀನೆನ್ನ ಮನದವಳು
ನೀನಿರಲು ಜೊತೆಯಲ್ಲಿ
ಬದುಕೆಲ್ಲಾ ಬೆಳ್ದಿ೦ಗಳು

ನಿನ್ನ ಕಾಲು೦ಗರುದ
ಬೆರಳನ್ನೆ ನಾ ಹಿಡಿದು
ಒ೦ದೊ೦ದು ಹೆಜ್ಜೆಗೂ
ನಾನಿರುವೆನೆ೦ದೆ
ನನ್ನೊಳಗಿನಾತ್ಮವನು
ನಗು ನಗುತ ಸ್ವಾಗತಿಸಿ
ಒಲವಿ೦ದೆ ಅಡಿಯಿಟ್ಟು
ಬೆಳಕಾಗಲೆ೦ದೆ

ನಡೆದು ಬ೦ದಿಹೆ ನೀನು
ತೊರೆದು ಅರಮನೆಯನ್ನು
ಇಲ್ಲಿಹುದು ಬರಿ ಪ್ರೀತಿ
ಮೊಗೆ ಮೊಗೆದು ಕೊಡಲೇನು
ಹಾದಿಯಿದು ಬಲು ದೂರ
ನಡೆದು ಸೇರುವ ಬಾರ
ಕೈಹಿಡಿದು ನಡೆದಿರಲು
ಹಾದಿ ಬಲು ಸೊಗಸಿನದು

ನೇಗಿಲನು ಹೊರಸಿಹರು
ಉಳುವವರು ನಾವೇ
ಒಲವಿನಲಿ ಹರಸಿಹರು
ಮೆರೆವವರು ನಾವೇ,
ಹೊಸ ಮನೆಗೆ ಇಡು ಹೆಜ್ಜೆ
ಕುಣಿಸುತಲಿ ಕಿರುಗೆಜ್ಜೆ
ಕಾಣುವುದು ಪ್ರೇಮ ಛಾಯೆ

ನೀನೆಲ್ಲಿಯವಳೋ
ನಾನೆಲ್ಲಿಯವನೋ
ಸೇರಿದುದು ವಿರಿ೦ಚಿಯೊಲವು
ಇಬ್ಬರಿಗೂ ಸುಖವಾಗಿ
ಬದುಕೆಲ್ಲಾ ಸಮನಾಗು
ಬಾಳುವುದೇ ಸತ್ಯದರಿವು

No comments: