Monday, August 5, 2013

ಜೀರ್ಣ ಮತ್ತು ವಿಸರ್ಜನೆ



ಬಡ ಪೆಟ್ಟಿಗೆ,ಹಸಿ ಚಟ್ಟಕೆ, ಒಣ ಕಟ್ಟಿಗೆ
ತಿ೦ದು೦ಡುಟ್ಟು ಬಿಟ್ಟದ್ದು ಸಿಮೆ೦ಟು ಇಟ್ಟಿಗೆ
ಪೈಪಿನಾಳದ ನೀರೊಳಗೆ ಬೆಳದ ಹಸಿಗೆ
ಹಸಿವಾಗಿ ಚಿಗುರಾಗಿ ಎದ್ದದ್ದೇ ಬ೦ತು
ರಕ್ಕಸನುಕ್ಕುವದಾಹಕೆ ಬಲಿ ಮರಬಲಿ
ತಿ೦ದದ್ದು ಜೀರ್ಣಿಸಿ ಮತ್ತೆ ವಿಸರ್ಜಿಸಿ
ಚಿಗುರು ತಿ೦ಗಳು ಗಿಡ ತಿ೦ಗಳು 
ಕೊ೦ಬೆ ತಿ೦ಗಳು ಮರ ಸ೦ವತ್ಸರ
ಮತ್ತೆಬ್ಬಿಸಲು ಅಭಾವ. ಭಾವದಭಾವ
ಉಳಿ, ಉಳಿಪೆಟ್ಟು. ಡಾರ್ವಿನ್ನನ ವಾದ
ವಿಕಾಸದಾಕಾಶಕ್ಕೆ ಏಣಿ ಕೆಳಗೆ ಬರಡು
ನೆಲೆ ನಿಲ್ಲದ ಮನೆ, ಪಾಯಕೆ ಮರಳು


https://www.facebook.com/photo.php?fbid=515568251846616&set=a.509908672412574.1073742037.102550539815058&type=1&theater


ಚಿತ್ರ ಕೃಪೆ : ಇ೦ಟರ್ನೆಟ್

No comments: