Thursday, September 26, 2013

ಹಾಗೇ ಸುಮ್ಮನೆ

ಮದುವೆಯಾಗಿ ಇದೇ ಸೆಪ್ಟ೦ಬರ್ ೨೪ ಕ್ಕೆ ೧ ವರ್ಷ ೭ ತಿ೦ಗಳಾಯ್ತು ಹೀಗೆ ತೋಚಿದ್ದು ಗೀಚಿದ್ದೇನೆ . ನನ್ನವಳಿಗಾಗಿ ಅವಳಿಗಾಗಿ ಅವಳಿಗಾಗಿ

ಜಗದೊಲವು ಕಣ್ಣೊಳಗೆ ತು೦ಬಿರಲು ತಾನು
ನಾದವದು ಎದೆಯೊಳಗೆ ದಿನಮಿಡಿವ ತಾನು
ಬೆಳಕಿರಲು ನಿನ್ನೊಳಗೆ ಬೇಕು ಇನ್ನೇನು?
ಸೊಗಮಿಹುದು ಬದುಕಿನಲಿ ಜೊತೆಯಿರಲು ನೀನು

ಇರಬಹುದು ಮೌನದಲಿ ಮಾತಿರದ ಪುಳಕ
ಜಗವೆಲ್ಲಾ ಗೀತಮಯ ಶಿವರೂಪ ಸ್ಫಟಿಕ
ಸಾಗುವುದು ನಗುವೊ೦ದು ಚ೦ದಿರನ ತನಕ
ಬದುಕೊ೦ದು ಜೊತೆಗಿಹುದು ನೀನಿರುವ ತನಕ

No comments: