Wednesday, September 10, 2014

ಮಂಗಳ ರಾಮ

ಕರೆಯುವನು ಶ್ರೀರಾಮ ಎಲ್ಲರನು ಜೊತೆಗೆ
ಸತ್ಯವದು ರಾಮಪಥ ಉನ್ನತಿಯ ಕಡೆಗೆ

ಎಲ್ಲರಲು ರಾಮನಿಹ ರಾವಣರ ಜೊತೆಗೆ
ಬೆಳೆಸಿಕೊಳುವಾಯ್ಕೆಯನು ಬಿಟ್ಟಿಹನು ನಮಗೆ

ಸದ್ಗುಣವು ಸನ್ಮತಿಯು ಶ್ರೀರಾಮದಾರಿ
ದುರ್ಗುಣವು ದುರ್ಮತಿಯು ರಾವಣನ ದಾರಿ

ಸ್ತ್ರೀಯರನು ಗೌರವಿಸೆ ಶ್ರೀರಾಮ ನೀತಿ
ಮಾನಹರಣವದು ರಾವಣನ ನೀತಿ

ತ್ಯಾಗದಲಿ ಬೆಳೆದಿಹುದು ಶ್ರೀರಾಮ ಮೂರ್ತಿ
ಸ್ವಾರ್ಥದಲಿ ಕುಗ್ಗಿಹುದು ರಾವಣನ ಕೀರ್ತಿ

ಹನುಮನಿಗೆ ತನ್ನನ್ನೆ ಕೊಟ್ಟಿಹನು ರಾಮ
ಮೋಹಕ್ಕೆ ಬಲಿಯಾಗಲೇಕಯ್ಯ ಜನುಮ

ರಾಮತ್ವ ಒಳಸೇರಿ ಚೆಲುವಾಗಬೇಕು
ರಾವಣನ ನೀತಿಯದು ಕ್ಷರವಾಗಬೇಕು

ಮನರಾಮ ಬೆಳೆದಂತೆ ರಾವಣನು ಮಡಿವ
ರಾವಣನು ಬದಲಾಗಿ ಶಿವರಾಮನುಳಿವ

1 comment:

Badarinath Palavalli said...

ಅಮಿತ ಭಕ್ತಿ ಭಾವದ ರಚನೆ. ತಮ್ಮದೇ ಒಂದು ಅಂಕಿತ ನಾಮವನ್ನೂ ಅಳವಡಿಸಿದ್ದರೆ ಚೆನ್ನಾಗಿರುತ್ತಿತ್ತು.