Wednesday, September 17, 2014

ಹೀನೋಪಮೆ


***************
ಉಪಮಾನ ಕಡಿಮೆಯಾಗಿ
ಉಪಮೇಯವೇ ಹೆಚ್ಚಾದರೆ.......
ಕೊಚ್ಚೆಯು ಸಿಂಬಳದ ಹುಳುವಂತೆ
ಕಂಡದ್ದು ಹೀನೋಪಮೆ
ಕಾಮಾಲೆ ಕಣ್ಣು ಹಳದಿ ಸೆರಗಿನಂತೆ ಕಂಡದ್ದು
ಬುದ್ದಿಜೀವಿಯೊಬ್ಬ ಎಡಚನಂತೆ ನೋಡಿದ್ದು.
***************
ಯಾವ ಯಾವುದಕ್ಕೋ
ತನ್ನನ್ನೇ ಮಾರಿಕೊಂಡವನು
ಚಿಗೊವೆರಾ ಬಗ್ಗೆ ಹರಟೆ ಕೊಚ್ಚುತ್ತಾನೆ
ಹೋರಾಟಕ್ಕಿಳಿಯುತ್ತಾನೆ.
ಅವನ ಬೆಂಬಲಕ್ಕೆ
ವ್ಯಾಧಿ ಪೀಡಿತ, ಹೆಣ್ಣುಗಳ ದಂಡು
ಉರುಳಾಡಿ ಬಿದ್ದು,
ಅಲ್ಲಿ ಇಲ್ಲಿ ಸಿಕ್ಕದ್ದನ್ನು ಕದ್ದು, ಎಳೆದು
ಡಾಕ್ಟರೇಟ್ ಗಿಟ್ಟಿಸಿದ ಗಟ್ಟಿಗರು
ಮತ್ತದೇ ಜಗ್ಗಾಟ
ನೀನೇಕೆ ಇಷ್ಟು ನೀಟು,
ಛೀ ಅಸಹ್ಯ, ನನ್ನ ನೋಡು
ಗಲೀಜಿನಲ್ಲಿ ಹೊರಳಾಡಿ
ಜಗತ್ತಿನ ಕಣ್ಗೆ ಕಾಣಿಸುತ್ತಿದ್ದೇನೆ
ನಿನ್ನಂಥವರು ನೂರು ಸಾವಿರಿರಬಹುದು
ನನ್ನಂಥವರಿಂದಲೇ ಸುದ್ದಿ,
ಗುಟುರು ಹಾಕಿ,
ಒಮ್ಮೆಲೇ ಹತ್ತಾರು ಮರಿಗಳ ಹೆತ್ತು
ಸೂಕರ ಮಾತೆ, ಸೂ... ಸೂ... ಕರ ಮಾತೇ..
*************
ನಾನು ರಾವಣ, ಅದೇ ಹೆಮ್ಮೆ..
ನಾನು ಚಾಣೂರ ಅದೇ ಗರಿಮೆ
ರಾಮನಿದ್ದುದೇ ತಪ್ಪು!
ಮಾಧವ ಬಂದದ್ದೇಕೋ?
ರಕ್ಕಸತನವೇ ಮಧುರ
ಹೊಡಿ ಬಡಿ ಕೊಲ್ಲು,
ಅಪಹರಿಸು, ಅವಮಾನಿಸು,
ವ್ಯಭಿಚಾರಿಸು, ಅದನ್ನು ಕಾನೂನಿಸು
ಮನೆಯ ಹೆಂಡಿರು ಮಕ್ಕಳನು
ಹೊರಗಿಡು... ಇನ್ನೊಬ್ಬಳನು...
ಆದರ್ಶಗಳ ಕುಟ್ಟಿ ಹುಡಿಯೆಬ್ಬಿಸಿ
ದಾನವದೇಶ ಕಟ್ಟಿಬಿಟ್ಟರೆ.... ಅಲ್ಲಿಗೆ
ಉದಯವಾದಂತೆಯೇ ಭಾರತ.
***********
ಅದೇಕೋ ಈ ಸರಿಗಳೇ ಸರಿಬರುವುದಿಲ್ಲ
ಯಾವನೋ ನೆಟ್ಟ
ಕಬ್ಬಿಣದ ಗೂಟಕ್ಕೆ
ನೀರೆರೆದು ಚಿಗುರಿಸುವ ಮಂದಿ
ಅವನ ತುರಿಕೆಗೆ ಇವರ ಕೆರೆತ.
ಅವನಿಗಿತ್ತು ಸರಿಯನ್ನು, ತಪ್ಪನ್ನು
ಒಪ್ಪಿಕೊಳ್ಳುವ ಛಾತಿ,
ಇವರಿಗೋ ಗೊಂದಲ,
ಸರಿಯೊಳಗೆ ತಪ್ಪಿರಬಹುದು
ತಪ್ಪೊಳಗೂ ಬೆದಕಿದರೆ ಸರಿ.
********
ಹೀನೋಪಮೆ
ಅದು ಹೀಗಿದೆ... ಎನ್ನುವುದು
ಹೀಗೇ ಎನ್ನುವುದು ಹೆಚ್ಚಾಗಿ
ಅದು ಹುಚ್ಚಾಗುವುದು.
ಸೂರ್ಯನು ದೀಪದಂತೆ ಉರಿಯುತ್ತಿದ್ದಾನೆ
ಜೊನ್ನೆಯು ಐಸಿನಂತೆ ತಂಪು
ಹೀಗೆ ಹೀಗೆ...

1 comment:

Badarinath Palavalli said...

ಇತ್ತೀಚೆಗೆ ಹೀನೋಪಮೆಗಳ ಕಾಟ ಶುರುವಾಗಿದೆ. ಓದುಗರನ್ನು ಕಾಯುವರು ಯಾರೋ?