Tuesday, October 7, 2014

ತ್ರೀಣಿ


ಸಾಲುಗಮನದ ಮೇಲೆ ಹಾರುವ
 ತೇಲುಮನಸಿನ ತಾಳವಿದು
ಮೂರು ಮೂರರ ಸಾರಿ ಹೇಳುವ
ನೂರು ಮಾತುಗಳ ಮೇಳವಿದು

ನಾನು ನನ್ನೊಳಗೆ ಸೇರಿ ಹಾಡುವ
ನಮ್ಮದೆನ್ನುವ ಲೋಕದೊಳು
ನಿನ್ನ ಇರುವಿಕೆಯೆ ಬೇಕೆನ್ನುವ
ಗೀತದೊಳಗಿನ ನಾದವಿದೆ

ಯಾರು ಕರೆದರೂ ಕೇಳದಂತಿದೆ
ಯಾವ ಮಾಯೆಯಿದು ನನ್ನೊಳಗೆ
ನಾನು,ನನ್ನವಳೊಳಗೆ ನೀನು ಸೇರಿರಲು
ಮಾತು ಮೌನದೊಳು ನಾದ ಬೆರೆತಂತೆ

ಮಾಯೆಯಲ್ಲವಿದು ಸ್ವಪ್ನವಲ್ಲವಿದು
ನನ್ನ ಬೆಳವಣಿಗೆಯ ಛಾಯೆಯೋ
ಅವಳು ಬೆಳೆದಂತೆ ನಾನು ಅಳಿದಿರಲು
ನೀನು ನಾವಳದ ತ್ರೀಣಿಯೋ

1 comment:

Badarinath Palavalli said...

'ಅವಳು ಬೆಳೆದಂತೆ ನಾನು ಅಳಿದಿರಲು
ನೀನು ನಾವಳದ ತ್ರೀಣಿಯೋ' ಯ ತ್ರೀಣಿಯ ಗೂಢಾರ್ಥ?