Friday, October 10, 2014

ಲಾಲಿ ಹಾಡು



ಚಿತ್ರದುರ್ಗಕೆ ಹೋಗಿ ಚಿತ್ತಾರದ ಹೊದಿಕೆಯನು
ನಿನಗಾಗಿ ನಾ ತರುವೆsನು| ಕಂದಮ್ಮ
ತುಂಟಾಟ ಮಾಡsದೆ ನೀ ಮಲಗು
**************
ಕನಸಿನಲಿ ಕಿಟ್ಟಣ್ಣ ನಿನ ಕೂಡಿ ಆಡುವನು
ಬಣ್ಣದ ಬುಗುರಿಯ ಹಿಡಕೊಂಡು| ಕೈಯಲ್ಲಿ
ಮೂಲೋಕದೊಳಗೆ ಕುಣಿಯುವನು
***************
ಒಲೆ ಮೇಲೆ ಹಾಲಿಟ್ಟು ಬಂದಿರುವೆ ನನ ಕಂದ
ಕಳ್ಳಾಟವಾಡದೆ ನೀ ಮಲಗು| ಕೂಸಣ್ಣ
ಬಾಲ ಚಂದಿರನ ತರುವೆSನು
****************
ಕೂಸು ನಕ್ಕಾಗೆಲ್ಲಾ ಚಿಕ್ಕಿಗಳು ನಗುತಾವ
ಚಂದ್ರsಮ ನನ ಕಂದ ವಂಶಕ್ಕೆ| ಬಾನಲ್ಲಿ
ಕೂಗಾಡಿ ಕುಣಿಯುತ ಆಡ್ಯಾನ  

1 comment:

Badarinath Palavalli said...

ಜಾನಪದ ಶೈಲಿಯ ಈ ಶಿಶುಗೀತೆಗಳು ತುಂಬ ಚೆನ್ನಾಗಿವೆ. ಇದನ್ನು ಕೇಳಿದ ತಮ್ಮ ಮಗಳ ಖುಷಿ ಹೇಗಿತ್ತು?