Friday, October 24, 2014

ಅವತಾರ

ತೆಲುಗಿನ ಮಹಾ ಕವಿ ಶ್ರೀ ಶ್ರೀ ಅವರ ಕ್ರಾಂತಿಗೀತೆಗಳು.
ಅವರ ಮಹಾ ಪ್ರಸ್ಥಾನಂ ಕವನ ಸಂಕಲನದಲ್ಲಿನ ಒಂದು ಕವನ ’ಅವತಾರಂ’ ಅದರ
ಭಾವಾನುವಾದ.
ದಂಡಧರನ ಚಂಡಗೋಣದ
ಲೋಹಘಂಟೆಯು ಕತ್ತಲಲ್ಲಿ
ಶಬ್ದಿಸುತ್ತಿತ್ತು

ನರಕಲೋಕದ ನರಿಗಳೆಲ್ಲಾ
ಕಟ್ಟುಹರಿದು ಊಳಿಡಿತ್ತಾ
ಓಡತೊಡಗಿದವು
ಸೂರ್ಯದೇವನ ಸಪ್ತಹಯಗಳು
ಬಾಯಿಗಳೆದು ನೊರೆಯಚೆಲ್ಲುತ
ಕಾಲು ಕೆದರಿ ಓಡತೊಡಗಿದವು
ಚಂಡದುರ್ಗೆಯ ಗಂಡುಸಿಂಹವು
ಮೈಗೊಡವುತ, ಘರ್ಜಿಸುತ್ತಾ
ರಕ್ತ ಬೇಡಿದವು
ಇಂದ್ರದೇವನ ಮದಿಸಿದಾನೆಯು
ಘೀಳಿಡುತ್ತಾ ಸ್ಪರ್ಧೆಗಿಳಿದಿತ್ತು
ನಂದಿಕೇಶನು ತುಡುಗಿನಿಂದ
ಚಂಡ ಢಮರುಗ ಬಡಿದು ತಾನು
ಕೇಕೆ ಹಾಕುತ ಕುಣಿಯತೊಡಗಿದನು
ವರಾಹ ಮೂರ್ತಿಯು ರೌದ್ರತನದಲಿ
ಕೋರೆ ಚಾಚುತ
ಮೇರೆ ದಾಟಿದನು
ವಸುಧೆಯೊಳಗೆ ಹೊಸತು ಸೃಷ್ಟಿಗೆ
ಮಹಾವತಾರದ ದಾರಿ ಕಾದಿತ್ತು

No comments: