Thursday, May 14, 2015

ಬರುವಿಕೆ

ಬರುವಿಕೆ,,,
ಮುಂಬಾಗಿಲ ತೋರಣದ ಮಾವಿನೆಲೆ ಕೇಳುತಿದೆ
ಬರುವಳೆಂದು ನಿನ್ನ ಹುಡುಗಿ?
ಮಲ್ಲಿಗೆಯ ಬಳ್ಳಿಯದು ಮೌನದಲಿ ಕೇಳುತಿದೆ
ಬರುವಳೆಂದು ನಿನ್ನ ಹುಡುಗಿ?
ಎಳೆ ಬಿಸಿಲೆ, ಬಿಸಿಯಾಗಿ ಬೀಳುತಿದೆ,
ಇರಬಹುದು ನನ್ನ ಭ್ರಮೆ,
ಕೆಲಸದ ನಡುನಡುವೆ ಮೌನದಲಿ ಕಳೆಯುವೆನು
ಇರಬಹುದು ನನ್ನ ಭ್ರಮೆ
ಮೊಮ್ಮಗನ ಕಾಣುವೊಲು ತವಕದಲಿ ಕೇಳುವರು
ಬರುವಳೆಂದು ನಿನ್ನ ಹುಡುಗಿ
ತವರದುವೆ ಹೆಚ್ಚಾಯ್ತೆ, ಮಲೆನಾಡ ಹುಚ್ಚಾಯ್ತೆ
ಕಾಯುತಿಹೆನು ನಾನಿಲ್ಲಿ ಕೊರಗಿ
ಕೂಸಿನಾಟದ ಮಾಟ ಅವರ ಸಮಯದ ಬೇಟ
ನಿವೃತ್ತ ಜೀವಕದುವೆ ಶಾಂತಿ
ಹಾಗೆಂದು ಮುನಿಸಿನಲಿ ಬಾರದಿರು ಹುಡುಗಿ
ನೊಂದಾರು ಬೀಗ ಬೀಗತಿ
ದಿನಗಳೆಣಿಸೆಣಿಸಿ ಕಾದಿರುವೆ ನಾನಿಲ್ಲಿ
ತೇಲಿಬಿಡುವೆ ಮುತ್ತುಗಳನೀಹೊತ್ತು
ಸ್ವಪ್ನ ಲೋಕದ ತುದಿಗೆ ಚಂದಿರನೆ ಗುರುತು
ನಿನ್ನ ಬರುವಿಕೆ ಅವನಿಗೂ ಗೊತ್ತು

1 comment:

Badarinath Palavalli said...

ಅವಳ ಬರುವಿಕೆಗೆ ಕಾದುಕುಳಿತ ನಾಯಕನ ಪರಿತಾಪ ವಿರಹದಳಲು ಕೇಳದೇ ನಿಮಗೆ ನಾಯಕಿ?