Tuesday, November 24, 2015

ದೇಮವ್ವನ ಸವಾರಿ- ಚತುರೋಕ್ತಿ (೧)


ಬುದ್ಧಿಯ ನೆತ್ತಿಯ ನೆಕ್ಕುತ ಬಂತೋ ದೇಮವ್ವನ ದಂಡು

ನೂರು ಬೀದಿಯ ನಾರುಕೊಳಚೆಯ ನಾಲಿಗೆಯs ತುಂಡು
ಜಾರ ವಿಚಾರವ ಜೋರುದನಿಯಲಿ ಕೂಗಾಡುವ ಬಂಡು

ಕಾಲ ಕೀವಿನ ಕತ್ತಲೆಯೊಳಗೆ ಕಾಣೆ ಮೀನುಗಳು ನೂರು
ಕೋಲು ಕುಣಿಸುವ ಬೆತ್ತಲೆ ನಾಯಿಯ ಬೊಗಳಾಟದ ಹೋರು
ತೊಳೆವ ಕೈಯೊಳಗೆ ಅನ್ನವ ತಿನ್ನುತ ಹೀನ ಚೇತನವ ಸೇರು

ಆಡಿ , ಹಾಡುವ , ಹೂಡು ಕಾಡೊಳಗೆ ಕಾಡುತಾs ಮೇಲಾಡು
ನೋಡಿ ಹಾರುವ ಗುಂಪು ಗುಂಪಿನಲಿ ನಿನನೆಲ್ಲಿದೆ ಮಾಡು
ಗೋಡಿS ಮ್ಯಾಲಣ ಬ್ಯಾಣ ಬಯಲಿನಲಿ ಹೋರಿ ದನಗಳ ಬೀಡು
ಜೋಡಿ ಚಪ್ಪಲಿ ಸವೆದು ಹೋಗದs ದೇಮವ್ವನs ದೂsಡು.

No comments: